ಎಂ.ಫ್ರೆಂಡ್ಸ್ ಕಾರುಣ್ಯಕ್ಕೆ ರೋಹನ್ ಕಾರ್ಪೊರೇಶನ್ ಪ್ರತಿವರ್ಷ ಒಂದು ತಿಂಗಳ ಪ್ರಾಯೋಜಕತ್ವ

Prasthutha|

►ಹಸಿವು ನೀಗಿಸುವ ಕಾಯಕಕ್ಕೆ ರೋಹನ್ ಮೊಂತೇರೋ ಸಾಥ್

- Advertisement -

ಮಂಗಳೂರು: ಮಂಗಳೂರು ಮೂಲದ ಸಂಸ್ಥೆ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ರೋಹನ್ ಮೊಂತೇರೋ ಅವರು ಮಂಗಳೂರು ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರತಿನಿತ್ಯ ವಿತರಿಸುತ್ತಿರುವ ರಾತ್ರಿಯ ಭೋಜನ ವ್ಯವಸ್ಥೆಗೆ ಒಂದು ತಿಂಗಳ ಪ್ರಾಯೋಜಕತ್ವ ಎರಡೂ ಕಾಲು ಲಕ್ಷ ರೂಪಾಯಿ ವಿತರಿಸಿದರು.

ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಸ್ವಾತಂತ್ರ್ಯೋತ್ಸವದಂದು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೋಹನ್ ಮೊಂತೇರೋ, ನಾವು ಗಳಿಸಿದ್ದರಲ್ಲಿ ಸಮಾಜಕ್ಕೂ ಕಿಂಚಿತ್ ಪಾಲು ನೀಡಿದಾಗ ಮನಸ್ಸು ತೃಪ್ತಿಯಾಗುತ್ತದೆ. ಸಣ್ಣ ಒಂದು ಸಹಾಯವೂ ಸೃಷ್ಟಿಕರ್ತನ ಪ್ರೀತಿಗೆ ಪಾತ್ರವಾಗುತ್ತದೆ. ಈ ನಿಟ್ಟಿನಲ್ಲಿ ಎಂ.ಫ್ರೆಂಡ್ಸ್ ನಡೆಸುವ ಕಾರುಣ್ಯ ಯೋಜನೆ ಪ್ರಶಂಸಾರ್ಹ. ಈ ಯೋಜನೆಗೆ ಪ್ರತಿ ವರ್ಷ ಆಗಸ್ಟ್ ತಿಂಗಳ ಪ್ರಾಯೋಜಕತ್ವ ನೀಡುವುದಲ್ಲದೇ ಅಗತ್ಯ ಬಿದ್ದರೆ ಇತರ ಸಂದರ್ಭವೂ ಸಹಾಯ ಮಾಡುವುದಾಗಿ ತಿಳಿಸಿದರು.

- Advertisement -

ಇದೇ ಸಂದರ್ಭ ರೋಹನ್ ಮೊಂತೇರೋ ಅವರನ್ನು ಎಂ.ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು.

ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು. ವೆನ್ಲಾಕ್ ಆಸ್ಪತ್ರೆ ಆರ್ ಎಂ ಓ ಡಾ. ಸುಧಾಕರ್ ಮುಖ್ಯ ಅತಿಥಿಯಾಗಿದ್ದರು. ಎಸ್ಸೆಂ ಮಹಮೂದ್ ವಿಟ್ಲ, ಎಂ.ಫ್ರೆಂಡ್ಸ್ ಸಂಸ್ಥೆಯ ಕೋಶಾಧಿಕಾರಿ ಅಬೂಬಕರ್ ನೋಟರಿ, ಝುಬೈರ್ ಡ್ರೀಮ್ಸ್, ಹಮೀದ್ ಅತ್ತೂರು, ಮಹಮ್ಮದಲಿ ಕಮ್ಮರಡಿ, ಅಬೂಬಕರ್ ಪುತ್ತು ಉಪ್ಪಿನಂಗಡಿ, ಸಿ.ಎಚ್. ಗಫೂರ್ ಮೂಡಬಿದ್ರಿ, ಇಬ್ರಾಹಿಂ ಮೊಯ್ದಿನ್ ನಂದಾವರ, ವಿ ಎಚ್ ಅಶ್ರಫ್, ಹಂಝ ಬಸ್ತಿಕೋಡಿ, ಶಾಕಿರ್ ಹಾಜಿ ಪುತ್ತೂರು, ಆಶಿಕ್ ಕುಕ್ಕಾಜೆ, ಸಫ್ವಾನ್ ವಿಟ್ಲ, ಹನೀಫ್ ಕುದ್ದುಪದವು, ಆರಿಫ್ ಪಡುಬಿದ್ರಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿ ಪ್ರಸ್ತಾವನೆಗೈದರು. ಎಡ್ವಕೇಟ್ ಶೇಖ್ ಇಸಾಕ್ ವಂದಿಸಿದರು.

Join Whatsapp