ಬಿಸಿಸಿಐ ನೂತನ ಅಧ್ಯಕ್ಷರಾಗಿ ರೋಜರ್ ಬಿನ್ನಿ ನೇಮಕ

Prasthutha|

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಮಂಗಳವಾರ ಬಿಸಿಸಿಐ’ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಸೌರವ್ ಗಂಗೂಲಿ ಅವರಿಂದ ಅಧಿಕಾರ ವಹಿಸಿಕೊಂಡರು.

- Advertisement -

ಭಾರತೀಯ ಕ್ರಿಕೆಟ್ ತಂಡದ ಮಾಜಿ ತಾರೆ, 1983 ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರನ್ನು ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಅವರ ನೇಮಕವನ್ನು ಪ್ರಕಟಿಸಲಾಯಿತು. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸ್ಥಾನಕ್ಕೆ ಬಿನ್ನಿ ಅವರನ್ನು ಆಯ್ಕೆಗೊಳಿಸಲಾಗಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ 67 ವರ್ಷದ ಬಿನ್ನಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.

- Advertisement -

ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಲಿರುವುದರಿಂದ ಪದಾಧಿಕಾರಿಗಳ ಆಯ್ಕೆ ಕೇವಲ ಔಪಚಾರಿಕವಾಗಿತ್ತು.

ಬಿನ್ನಿ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು ಮತ್ತು ಇದೀಗ ರಾಜ್ಯ ಸಂಸ್ಥೆಯಲ್ಲಿ ಹುದ್ದೆಯಲ್ಲಿದ್ದ ತಮ್ಮ ಸ್ಥಾನವನ್ನು ತೊರೆಯಲಿದ್ದಾರೆ. ಅವರು 1983ರಲ್ಲಿ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಎಂಟು ಪಂದ್ಯಗಳಲ್ಲಿ ಅವರು 18 ವಿಕೆಟ್’ಗಳನ್ನು ಉರುಳಿಸಿದ್ದರು. ಇದು ಪ್ರತಿಷ್ಠಿತ ವಿಶ್ವಕಪ್ ಪಂದ್ಯಾವಳಿಯ ಆ ಆವೃತ್ತಿಯಲ್ಲಿನ ಮಹತ್ವದ ಸಾಧನೆಯಾಗಿದೆ.

Join Whatsapp