ಕೋವಿಡ್ ಸೋಂಕಿಗೆ ತುತ್ತಾದ ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ಅತಿಯಾದ ಆಯಾಸ-ಅಧ್ಯಯನದಲ್ಲಿ ದೃಢ

Prasthutha|

ಬೆಂಗಳೂರು: ಕೋವಿಡ್ ಬಳಿಕ ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ಅತಿ ಹೆಚ್ಚು ಆಯಾಸ ಕಂಡು ಬರುತ್ತಿರುವುದು ಅಧ್ಯಯನದಿಂದ ದೃಢಪಟ್ಟಿದೆ..

- Advertisement -

ಫೋರ್ಟಿಸ್, ಸಿ-ಡಾಕ್, ಏಮ್ಸ್,ಸಿನೆಟ್, ಎನ್-ಡಾಕ್ ಮತ್ತು ಡಯಾಬಿಟಿಸ್ ಫೌಂಡೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಅಧ್ಯಯನದಲ್ಲಿ ಟೈಪ್-2 ಡಯಾಬಿಟೀಸ್ ಇರುವವರು ಕೋವಿಡ್ ಸೋಂಕಿಗೆ ಒಳಗಾದದ ಬಳಿಕ ಸಾಮಾನ್ಯರಿಗಿಂತ ಅತಿ ಹೆಚ್ಚು ಆಯಾಸ ಹಾಗು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ವರದಿ ಬಿಡುಗಡೆ ಮಾಡಿ ಮಾತನಾಡಿದ ಫೋರ್ಟಿಸ್ ಸಿ-ಡಾಕ್‌ ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಅನೂಪ್ ಮಿಶ್ರ, ನಾವು ನಡೆಸಿದ ಅಧ್ಯಯನದಲ್ಲಿ ಟೈಪ್-2 ಡಯಾಬಿಟೀಸ್ ಹೊಂದಿರುವ ಹಾಗೂ ಕೋವಿಡ್ ಸೋಂಕಿಗೆ ತುತ್ತಾದ 56 ಜನರ ಆರೋಗ್ಯವನ್ನು ಪರಿಶೀಲಿಸಲಾಯಿತು. ಜೊತೆಗೆ 56 ಮಂದಿ ಕೋವಿಡ್‌ನಿಂದ ಬಳಲದೇ ಇರುವ ಟೈಪ್-2 ಡಯಾಬಿಟೀಸ್ ರೋಗಿಗಳನ್ನು 92 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು. ಡಯಾಬಿಟೀಸ್ ಇದ್ದು ಕೋವಿಡ್‌ಗೆ ತುತ್ತಾಗಿ ನಂತರ ಗುಣವಾದವರ ಆರೋಗ್ಯ ಸಂಪೂರ್ಣ ಹದಗೆಡುತ್ತಾ ಇತ್ತು, ಜೊತೆಗೆ ಹೆಚ್ಚಿನ ಆಯಾಸ ಇವರಿಗೆ ಕಾಡುತ್ತಿತ್ತು. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಏರಿಕೆ, ಬಿಪಿಯಲ್ಲಿ ಏರಿಳಿತ, ದೈಹಿಕ ಸಾಮರ್ಥ್ಯ ಕುಸಿತ, ತೂಕದಲ್ಲಿ ಅತಿಯಾದ ಇಳಿಕೆ ಸೇರಿದಂತೆ ಇತರೆ ಅಸಾಧಾರಣ ವ್ಯತ್ಯಾಸಗಳು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.

- Advertisement -

ಮಧುಮೇಹಿಗಳಿಗೆ ಕೋವಿಡ್ ಸೋಂಕು ಅತ್ಯಂತ ಅಪಾಯಕಾರಿ,, ಡಯಾಬಿಟೀಸ್ ಇರುವವರು ಸಾಧ್ಯವಾದಷ್ಟು ಈ ಸೋಂಕಿಗೆ  ಒಳಗಾಗದಂತೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ಸೋಂಕಿಗೆ ತುತ್ತಾಗಿದ್ದರೂ ಗುಣಮುಖರಾದ ಬಳಿಕ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಳವಾದಂತೆ ನೋಡಿಕೊಳ್ಳಬೇಕು. ಈ ಎಲ್ಲ ಅಂಶಗಳು ಅಧ್ಯಯನದಲಿಯೇ ಸಾಭೀತಾಗಿರುವುದರಿಂದ ಮಧುಮೇಹಿಗಳು ಎಚ್ಚರಿಕೆಯಿಂದ ಇರುವುದು ಒಳ್ಳೆಯದು,



Join Whatsapp