ವಿಟ್ಲ | ಪತಿ ಮಸೀದಿಗೆ ಹೋಗಿದ್ದ ವೇಳೆ ಮಹಿಳೆಯನ್ನು ಕಟ್ಟಿ ಹಾಕಿ ಹಾಡಹಗಲೇ ಮನೆ ದರೋಡೆ

Prasthutha|

ವಿಟ್ಲ : ಬೆಳ್ತಂಗಡಿಯ ವಿಎಚ್ ಪಿ ಮುಖಂಡರೊಬ್ಬರ ಮನೆ ದರೋಡೆ ಘಟನೆ ನೆನಪು ಮಾಸುವ ಮುನ್ನವೇ, ವಿಟ್ಲದ ಕಾಂತಡ್ಕದಲ್ಲಿ ಮತ್ತೊಂದು ದರೋಡೆ ಪ್ರಕರಣ ಹಾಡಹಗಲೇ ನಡೆದಿದೆ.

ಕಾಂತಡ್ಕದ ಮನೆಯೊಂದರಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಮಹಿಳೆಯೊಬ್ಬರೇ ಇದ್ದ ಸಂದರ್ಭ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕಟ್ಟಿಹಾಕಿ, ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದಿದ್ದಾರೆ.

- Advertisement -

ಕಾಂತಡ್ಕ ಜುಮಾ ಮಸೀದಿ ಮುಂಭಾಗದಲ್ಲಿ ಬಾಡಿಗೆ ಮನೆಯಲ್ಲಿರುವ ಆಟೊ ಚಾಲಕ ರಫೀಕ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ರಫೀಕ್ ಮಧ್ಯಾಹ್ನ ಮಸೀದಿಗೆ ತೆರಳಿದ್ದರು. ಅವರ 10 ವರ್ಷದ ಪುತ್ರ ಕೂಡ ಅವರೊಂದಿಗೆ ಮಸೀದಿಗೆ ತೆರಳಿದ್ದರು. ಈ ವೇಳೆ ಪತ್ನಿ ಜೈನಾಬ ಒಬ್ಬರೇ ಮನೆಯಲ್ಲಿದ್ದರು.

ಮಹಿಳೆಯನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿ, ಚಿನ್ನಾಭರಣ ದರೋಡೆಗೈದಿದ್ದಾರೆ. ರಫೀಕ್ ಅವರ ಮನೆಯ ಸುತ್ತಲೂ ಮನೆಗಳಿದ್ದರೂ ಘಟನೆ ಯಾರ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ.

ರಫೀಕ್ ಅವರು ಮಸೀದಿಯಿಂದ ಹಿಂದಿರುಗಿದ ಬಳಿಕ ವಿಷಯ ಗಮನಕ್ಕೆ ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -