ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯ ಕುಳಾಯಿ ರಾಷ್ಟ್ರೀಯ ಹೆದ್ದಾರಿಯಿಂದ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿ ನಡೆಯಲಿರುವುದರಿಂದ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 116ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ಅ.31 ರಿಂದ ಡಿಸೆಂಬರ್ 14ರವರೆಗೆ ಒಟ್ಟು 45 ದಿನಗಳು ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ವಿವರ ಇಂತಿದೆ:
ಕಾಮಗಾರಿ ನಡೆಯುವ ವೇಳೆ ಕುಳಾಯಿ ಚಿತ್ರಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕಾಮಗಾರಿ ನಡೆಯುವ ವೇಳೆ ರಾಷ್ಟ್ರೀಯ ಹೆದ್ದಾರಿ-66ರ ಚಿತ್ರಾಪುರ ದ್ವಾರ ಕಡೆಯಿಂದ ಚಿತ್ರಾಪುರ ಕಡೆಗೆ ಹೋಗುವಂತಹ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಬೈಕಂಪಾಡಿ ಮುಖಾಂತರ ಮುಂದಕ್ಕೆ ಚಲಿಸಿ ಜೋಕಟ್ಟೆ ಜಂಕ್ಷನ್ ನಲ್ಲಿ ಯು ಟರ್ನ್ ತೆಗೆದುಕೊಂಡು ಮೀನಕಳಿಯ ರಸ್ತೆ ಮುಖಾಂತರ ಚಿತ್ರಾಪುರ ಕಡೆಗೆ ಚಲಿಸುವುದು. ಅದೇ ರೀತಿ ಚಿತ್ರಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಬರುವಂತಹ ವಾಹನಗಳು ಮೀನಕಳಿಯ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸುವುದು.
ಕಾಮಗಾರಿ ನಡೆಯುವ ಸಮಯದಲ್ಲಿ ಸುರತ್ಕಲ್ ಕಡೆಗೆ ಸಂಚರಿಸುವ ರೂಟ್ ನಂಬರ್ 59 ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ-66ರ ಮೀನಕಳಿಯ ಮಾರ್ಗವಾಗಿ ಚಿತ್ರಾಪುರ ಕಡೆಗೆ ಸಂಚರಿಸುವುದು ಹಾಗೂ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.