ಹೊಸದಿಲ್ಲಿ: ಕೇಂದ್ರ ಸಾರಿಗೆ ಇಲಾಖೆಯು ‘ಭಾರತದಲ್ಲಿ ರಸ್ತೆ ಅಪಘಾತ- 2021′ ಎಂಬ ವರದಿ ಬಿಡುಗಡೆ ಮಾಡಿದ್ದು, ಕೆಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.
2021ರಲ್ಲಿ ಹೆಲ್ಮೆಟ್ ಧರಿಸದೆ ಒಟ್ಟು 45,593 ಮಂದಿ, ಸೀಟ್ ಬೆಲ್ಟ್ ಧರಿಸದೆ 16,397 ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ. ಒಟ್ಟಾರೆಯಾಗಿ ಅಪಘಾತಗಳಲ್ಲಿ 1,53,972 ಮಂದಿ ಮೃತಪಟ್ಟಿದ್ದಾರೆ.
ಸೀಟ್ ಬೆಲ್ಟ್ ಧರಿಸದೆ ಮೃತಪಟ್ಟವರಲ್ಲಿ 8,438 ಚಾಲಕರು ಮತ್ತು 7,959 ಮಂದಿ ಸಹ ಪ್ರಯಾಣಿಕರಾಗಿದ್ದಾರೆ.
ಹೆಲ್ಮೆಟ್ ಧರಿಸದೆ ಮೃತಪಟ್ಟವರಲ್ಲಿ 32,877 ಮಂದಿ ಬೈಕ್ ಚಾಲಕರು ಹಾಗೂ 13,716 ಮಂದಿ ಹಿಂಬದಿ ಸವಾರರು ಸಾವನ್ನಪ್ಪಿದ್ದಾರೆ. 93,763 ಮಂದಿ ಹೆಲ್ಮೆಟ್ ಧರಿಸದೆ ಗಾಯಗೊಂಡಿದ್ದಾರೆ. 2021ರಲ್ಲಿ ಒಟ್ಟು 4,12,432 ಸಾರಿಗೆ ಸಂಬಂಧಿ ಅಪಘಾತಗಳಾಗಿದ್ದು, 3,84,448 ಮಂದಿ ಗಾಯಗೊಂಡಿದ್ದಾರೆ.
ಸೀಟ್ ಬೆಲ್ಟ್ ಧರಿಸದಿರುವ ಕಾರಣ 39 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಾರಿಗೆ ಇಲಾಖೆ ಹೇಳಿದೆ.