ಕಾಸರಗೋಡು: ಮದರಸಾ ಶಿಕ್ಷಕ ಮುಹಮ್ಮದ್ ರಿಯಾಝ್ ಮೌಲವಿ ಕೊಲೆ ಪ್ರಕರಣದ ಅಂತಿಮ ವಿಚಾರಣೆ ಏಪ್ರಿಲ್ 1ರಂದು ಪೂರ್ಣಗೊಳ್ಳಲಿದೆ.
2017ರ ಮಾರ್ಚ್ 21ರ ಮಧ್ಯರಾತ್ರಿ ಮಸೀದಿಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ರಿಯಾಝ್ ಮೌಲವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಮೂಲತಃ ಕೊಡಗು ನಿವಾಸಿಯಾಗಿದ್ದ ರಿಯಾಝ್ ಮೌಲವಿ ಕಾಸರಗೋಡು ಪಝಯ ಚೂರಿ ಎಂಬಲ್ಲಿ ಸೇವಾ ನಿರತರಾಗಿದ್ದರು.
ಆರೋಪಿಗಳನ್ನು ಕೇಳುಗುಡ್ಡೆ ಅಯ್ಯಪ್ಪ ನಗರದ ಅಜೇಶ್ (26), ನಿತಿನ್ (25) ಮತ್ತು ಅಖಿಲೇಶ್ (30) ಎಂದು ಗುರುತಿಸಲಾಗಿದೆ.
ತೀರ್ಪು ಪ್ರಕಟಿಸುವ ದಿನಾಂಕವನ್ನು ಘೋಷಿಸುವ ಮೊದಲ ಪ್ರಕ್ರಿಯೆ ಈ ತಿಂಗಳ 23 ರಂದು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಾರಂಭಗೊಂಡಿದೆ. ಮಾರ್ಚ್ 25 ರಂದು ಪ್ರಕಟವಾಗಬೇಕಿದ್ದ ದಿನಾಂಕವನ್ನು ಏಪ್ರಿಲ್ 1 ಕ್ಕೆ ಮುಂದೂಡಲಾಗಿದೆ.
ಏಪ್ರಿಲ್ ಮೊದಲ ವಾರದಲ್ಲಿ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆಯಿದ್ದು, ಕಾರ್ಯ ವಿಧಾನಗಳು ಪೂರ್ಣಗೊಂಡ ಕೂಡಲೇ ತೀರ್ಪು ಪ್ರಕಟಣೆಯ ದಿನಾಂಕವನ್ನು ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.