ಕಾಸರಗೋಡು ಜಿಲ್ಲೆಯ ಎಲ್ಲಾ ಮಸೀದಿಗಳನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿದ ರಿಯಾಝ್ ಮೌಲವಿ ಕೊಲೆ ಆರೋಪಿ

Prasthutha|

ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲಾ ಮಸೀದಿಗಳನ್ನು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸುತ್ತೇವೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಲಾಗಿದೆ. ರಿಯಾಝ್ ಮೌಲವಿ ಹತ್ಯಾ ಪ್ರಕರಣದ ಪ್ರಧಾನ ಆರೋಪಿ ಈ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗಷ್ಟೇ ನ್ಯಾಯಾಲಯ ಖುಲಾಸೆಗೊಳಿಸಿದ ಆರ್ ಎಸ್ ಎಸ್ ಕಾರ್ಯಕರ್ತ, ಕೇಳುಗುಡ್ಡೆ ಅಯ್ಯಪ್ಪನಗರ ಭಜನಾಮಂದಿರದ ಸಮೀಪದ ಅಜೇಶ್ ಯಾನೆ ಅಪ್ಪು ಎಂಬಾತ ಕಾಸರಗೋಡಿನ ಎಲ್ಲ ಮಸೀದಿಗಳ ಧ್ವಂಸಗೈಯುವ ಬೆದರಿಕೆ ಹಾಕಿದ್ದು ಸಂಘಪರಿವಾರದ ಕಾರ್ಯಕರ್ತರ ಮಿನ್ನಲ್ ಕೇಸರಿ ಫ್ರೆಂಡ್ಸ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಆಗಿದೆ. ಅದರಲ್ಲಿ ರಿಯಾಝ್ ಮೌಲವಿ ಹತ್ಯೆ ಪ್ರಕರಣದ ತೀರ್ಪಿನ ಚಾನೆಲ್ ಸುದ್ದಿಯ ವೀಡಿಯೊ ಹಂಚಲಾಗಿತ್ತು. ಅದರ ಕೆಳಗೆ ಈ ಬೆದರಿಕೆಯ ಕಮೆಂಟನ್ನು ಅಜೇಶ್ ಹಾಕಿದ್ದಾನೆ.

- Advertisement -

ರಿಯಾಝ್ ಮೌಲವಿ ಕತ್ಯೆ ಕೇಸ್ ಸಂಬಂಧವಾದ ವೀಡಿಯೋದ ಕೆಳಗೆ, ಇದೊಂದು ಉದಾಹರಣೆ ಮಾತ್ರ. ದೊಡ್ಡದು ಇನ್ನು ನಡೆಯಲಿರುವುದಷ್ಟೇ. ಕಾಸರಗೋಡು ಜಿಲ್ಲೆಯಲ್ಲಿ‌ ಒಂದು ಮಸೀದಿಯೂ ಮುಂದೆ ಇರಲ್ಲ. ಒಂದು ಶುಕ್ರವಾರ ದಿವಸ ಬಾಂಬ್ ಹಾಕಿ ಎಲ್ಲ ಮಸೀದಿಗಳನ್ನು ಧ್ವಂಸಗೈಯಲ್ಲಿದ್ದೇವೆ. ನೋಡ್ತಾ ಇರಿ ಎಂದಾಗಿದೆ ಆರೆಸ್ಸೆಸ್ ಕಾರ್ಯಕರ್ತ ಅಜೇಶ್ ಕಮೆಂಟ್ ಹಾಕಿದ್ದು.

ಈ ಇನ್ಟ್ರಾಗ್ರಾಮ್ ಅಕೌಂಟ್‌ನಿಂದ ಬಂದೂಕು, ತಲವಾರ್ ಮುಂತಾದ ಆಯುಧಗಳ ಪ್ರದರ್ಶನ, ದ್ವೇಷ ಪ್ರಚಾರ ಮಾಡುತ್ತಾ ಬರಲಾಗುತ್ತಿದೆ.

- Advertisement -

ಮಾರ್ಚ್ 20, 2017ರ ಮುಂಜಾನೆ ಮದ್ರಸಾ ಅಧ್ಯಾಪಕ ರಿಯಾಝ್ ಮೌಲವಿಯವರ ಭೀಕರ ಹತ್ಯೆ ನಡೆಸಲಾಗಿತ್ತು. ಆರೆಸ್ಸೆಸ್ ಕಾರ್ಯಕರ್ತರಾದ ದುಷ್ಕರ್ಮಿಗಳು ಮಸೀದಿಯ ಆವರಣವನ್ನು ಪ್ರವೇಶಿಸಿ ರಿಯಾಝದ ಮೌಲವಿ ಇದ್ದ ಕೋಣೆಯ ಬಾಗಿಲು ಬಡಿದಿದ್ದು, ಬಾಗಿಲು ತೆರೆದಾಗ ಒಳನುಗ್ಗಿ 14 ಬಾರಿ ಚಾಕುವಿನಿಂದ ಇರಿದು ಸಾಯಿಸಿದ್ದರು. ಇದನ್ನು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.

ರಿಯಾಝ್‌ ಮೌಲವಿ ಹತ್ಯೆ ಪ್ರಕರಣದ ಮೊದಲ ಆರೋಪಿ ಅಜೇಶ್ ಮತ್ತು ನಂತರದ ಆರೋಪಿಗಳಾದ ನಿತಿನ್ ಕುಮಾರ್ ಮತ್ತು ಅಖಿಲೇಶ್ ಇವರನ್ನು ಕಾಸರಗೋಡು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾರ್ಚ್ 3, 2024 ರಂದು ಖುಲಾಸೆಗೊಳಿಸಿದೆ.

Join Whatsapp