ಕಲ್ಲಾಪು: SDPI ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಬಿರುಸಿನ ಮತ ಯಾಚನೆ

Prasthutha|

ಮಂಗಳೂರು: ದಿನದಿಂದ ದಿನಕ್ಕೆ ಮಂಗಳೂರು(ಉಳ್ಳಾಲ) ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳು ಕೂಡ ಬಿರುಸಿನ ಮತಯಾಚನೆ ಮಾಡುವ ಮೂಲಕ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ.

- Advertisement -

ಈ ಬಾರಿ ಗೆದ್ದೇ ಗೆಲ್ಲಬೇಕೆಂದು ಪಣತೊಟ್ಟಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಜಿದ್ದಾಜಿದ್ದಿನ ಹೋರಾಟ ನೀಡುವ ಉತ್ಸಾಹದಲ್ಲಿದ್ದು, ಬಿರುಸಿನ ಮತ ಯಾಚನೆ ನಡೆಸುತ್ತಿದ್ದಾರೆ.

ಇಂದು (ಸೋಮವಾರ) ತೊಕ್ಕೊಟ್ಟು ಸಮೀಪದ ಕಲ್ಲಾಪು ಗ್ಲೋಬಲ್ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ರಿಯಾಝ್ ಫರಂಗಿಪೇಟೆ ಮತ ಪ್ರಚಾರ ನಡೆಸಿದ್ದಾರೆ.

- Advertisement -

ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಥಾವುಲ್ಲಾ ಜೋಕಟ್ಟೆ , ರಾಜ್ಯ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಳ್ಳಾಲ ಉಪಸ್ಥಿತರಿದ್ದರು.