ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ವಿಕಲಚೇತನ ಯುವಕನಿಗೆ ಎಲೆಕ್ಟ್ರಿಕ್ ವೀಲ್ ಚೇರ್ ವಿತರಿಸಿದ ರಿಯಾಝ್ ಫರಂಗಿಪೇಟೆ

Prasthutha|

ಉಳ್ಳಾಲ: ಹುಟ್ಟಿನಿಂದ ಅಂಗವೈಫಲ್ಯಕ್ಕೊಳಗಾಗಿ ಸಂಕಷ್ಟ ಅನುಭವಿಸುತ್ತಿದ್ದ ಕಲ್ಲಾಪುವಿನ ವಿಕಲಚೇತನ ಯುವಕ ಅಹ್ಮದ್ ಬಶೀರ್ ಎಂಬವರಿಗೆ ಎಸ್.ಡಿ.ಪಿ.ಐ ಪಕ್ಷದ ಉಳ್ಳಾಲ ನಗರಸಭಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಮಿ ಇಮ್ತಿಯಾಝ್ ಕೋಟೆಪುರ ರವರು ದಾನವಾಗಿ ನೀಡಿದ ಎಲೆಕ್ಟ್ರಿಕ್ ವೀಲ್ ಚೇರ್ ಅನ್ನು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಯವರು ಇಂದು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -

ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದ ಅಹ್ಮದ್ ಬಶೀರ್ ರವರು ಮತ್ತೊಬ್ಬರ ಸಹಾಯ ಇಲ್ಲದ ಯಾವುದೇ ಕೆಲಸಗಳನ್ನು ಮಾಡಲು ಸಾದ್ಯವಿಲ್ಲದಷ್ಟು ಅಂಗ ವೈಫಲ್ಯಕ್ಕೆ ಒಳಗಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇವರನ್ನು ಬೇಟಿಯಾದ SDPI ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹಾಗೂ ಪಕ್ಷದ ನಾಯಕರು ಬಡ ಕುಟುಂಬದ ಬಶೀರ್ ರವರ ಸಂಕಷ್ಟ ಜೀವನವನ್ನು ಕಂಡು ಪಕ್ಷದ ವತಿಯಿಂದ ಒಂದು ಎಲೆಕ್ಟ್ರಿಕ್ ವೀಲ್ ಚೇರನ್ನು ಮುಂದಿನ ದಿನಗಳಲ್ಲಿ ದೊರೆಕಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಕಾರ್ಯಯೋನ್ಮಖರಾದ ಪಕ್ಷದ ನಾಯಕರು ಉಳ್ಳಾಲ ನಗರಸಭೆಯ ಉಪಾಧ್ಯಕ್ಷರಾದ ಇಮ್ತಿಯಾಝ್ ರವರು ದಾನವಾಗಿ ನೀಡಿದ ಅರುವತ್ತು ಸಾವಿರ ಬೆಲೆಬಾಳುವ ಎಲೆಕ್ಟ್ರಿಕ್ ವೀಲ್ ಚೇರ್’ಅನ್ನು ರಿಯಾಝ್ ಫರಂಗಿಪೇಟೆ ಯವರು ಪಕ್ಷದ ನಾಯಕರೊಂದಿಗೆ ಆಗಮಿಸಿ ಸಂತ್ರಸ್ತ ವಿಕಲಚೇತನ ಯುವಕ ಬಶೀರ್ ಅವರಿಗೆ ಹಸ್ತಾಂತರಿಸಿ ಚುನಾವಣಾ ಸಂದರ್ಭದಲ್ಲಿ ಕೊಟ್ಟ ವಾಗ್ದಾನವನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಿಯಾಝ್ ರವರು ಇನ್ನೊಬ್ಬರನ್ನು ಆಶ್ರಯಿಸದೆ ಬದುಕು ನಡೆಸಬೇಕಾದ ಹುಟ್ಟು ಅಂಗ ವೈಫಲ್ಯದಿಂದ ಬಳಲುವ ವ್ಯಕ್ತಿಗಳನ್ನು ಸರಕಾರ ಗುರುತಿಸಿ ಸರಕಾರದಿಂದ ಪರಿಹಾರ ದೊರೆಕಿಸಿ ಕೊಡಬೇಕಾದದ್ದು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಕರ್ತವ್ಯ ಆಗಿದೆ . ಚುನಾವಣೆಯಲ್ಲಿ ಆಯ್ಕೆಯಾಗಿ ಹೋದ ನಂತರ ಜನರ ಸಮಸ್ಯೆಗೆ ಸ್ಪಂದನೆ ನೀಡದ ಜನಪ್ರತಿನಿಧಿಗಳ ಧೋರಣೆಯಿಂದ ಸರಕಾರದ ಯೋಜನೆಗಳು ಫಲಾನುಭವಿಗಳಿಗೆ ಸಿಗತ್ತಿಲ್ಲ ಆದ್ದರಿಂದ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಇಂತಹ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

- Advertisement -

ಈ ಸಂದರ್ಭರ್ದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ರಾದ ಅನ್ವರ್ ಸಾದತ್ ಬಜತ್ತೂರು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ,ಉಳ್ಳಾಲ ಕ್ಷೇತ್ರ ಜತೆ ಕಾರ್ಯದರ್ಶಿ ಬಶೀರ್ ಹರೇಕಳ,ಉಳ್ಳಾಲ ನಗರ ಸಮಿತಿಯ ಅಧ್ಯಕ್ಷರಾದ ಸುಹೈಲ್ ಉಳ್ಳಾಲ ,ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ, ಕಾರ್ಯದರ್ಶಿ ಜಮಾಲ್ ಉಳ್ಳಾಲ ಸ್ಥಳೀಯ ಮುಖಂಡರಾದ ಅಬ್ದುಲ್ ಲತೀಫ್ ಕಲ್ಲಾಪು,ಸಬೀಲ್,ಶಿಹಾಬ್,ಸಲೀಂ,ಇಸ್ಮಾಯಿಲ್, ರಮೀಝ್ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು



Join Whatsapp