ಹಿಜಾಬ್ ಕುರಿತು ಹೈಕೋರ್ಟ್ ನಲ್ಲಿ ರಿಟ್ : ಫೆಬ್ರವರಿ 8ಕ್ಕೆ ವಿಚಾರಣೆ ಮುಂದೂಡಿಕೆ

Prasthutha|

ಬೆಂಗಳೂರು: ಕಾಲೇಜು ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 8ಕ್ಕೆ ಮುಂದೂಡಿದೆ.

- Advertisement -

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಪ್ರಕರಣದ ಸಂಬಂಧ ವಾದಿಸಲಿದ್ದು, ಹೀಗಾಗಿ ಪೀಠ ಇದೇ 8ಕ್ಕೆ ವಿಚಾರಣೆ ನಡೆಸಲು ತಿಳಿಸಿದೆ.

ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಮತ್ತು ತಮ್ಮ ಧಾರ್ಮಿಕ ಆಚರಣೆಗಳನ್ನು ಪಾಲಿಸುವ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿ ಮಧ್ಯಪ್ರವೇಶಿಸದಂತೆ ನಿರ್ದೇಶಿಸಬೇಕು ಎಂದು ಕೋರಿ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಗೆ ಕಳೆದ ವಾರ ರಿಟ್ ಸಲ್ಲಿಸಿದ್ದರು. 

- Advertisement -

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಪ್ರಕರಣದ ಸಂಬಂಧ ವಾದಿಸಲು ಬಯಸಿದ್ದಾರೆ. ಸಂಬಂಧಿತ ಪ್ರಕರಣವನ್ನು ಒಟ್ಟಾಗಿ ಮುಂದಿನ ವಿಚಾರಣೆಗೆ ನಿಗದಿಪಡಿಸಲು ಸೂಚಿಸಿ, ಪೀಠವು ಫೆಬ್ರವರಿ 8ಕ್ಕೆ  ವಿಚಾರಣೆ ಮುಂದೂಡಿದೆ

Join Whatsapp