ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಹೆಚ್ಚಿದ ತಾಪಮಾನದಿಂದ ಕಳೆದ 4 ದಿನಗಳಲ್ಲಿ 450 ಜನ ಸಾವಿಗೀಡಾಗಿದ್ದಾರೆ ಎಂದು ಎನ್ ಜಿಒ ಈಧಿ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.
ಕರಾಚಿಯಲ್ಲಿ ಕಳೆದ 4 ದಿನಗಳಿಂದ ನಿರಂತರವಾಗಿ 40 ಡಿಗ್ರಿ ಸೆ. ತಾಪಮಾನವಿದ್ದು, ಸಮುದ್ರ ತೀರದಲ್ಲಿ ಬಿಸಿ ಹವೆ ಮತ್ತಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ನಮ್ಮಲ್ಲಿ 4 ಶವಾಗಾರವಿದ್ದು ಈವರೆಗೆ 427 ಮೃತದೇಹಗಳನ್ನು ಸ್ವೀಕರಿಸಿದ್ದೇವೆ. ಉಳಿದ 23 ಮೃತದೇಹಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ಮೃತಪಟ್ಟವರಲ್ಲಿ ಬಹುತೇಕರು ಬಡವರಾಗಿದ್ದು, ದಿನವಿಡೀ ಬಿಸಿಲಿನ ಶಾಖಕ್ಕೆ ತುತ್ತಾಗಿದ್ದಾರೆ ಎಂದು ಈಧಿ ಸಂಸ್ಥೆಯ ಮುಖ್ಯಸ್ಥ ಫೈಸಲ್ ಈಧಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.