ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.
ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು.
ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದರು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಭಾರತೀಯ ಮೂಲದ ರಿಷಿ ಸುನಕ್ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ಭರವಸೆ ನೀಡಿದ್ದಾರೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.
ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬೊರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್‌ನಿಂದ ಹಿಂದೆ ಸರಿದ ಕಾರಣ ಸುನಕ್ ಹಾದಿ ಸುಗಮಗೊಂಡಿತು. ಸುನಕ್ ವಿರುದ್ಧ, ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್ ಸ್ಪರ್ಧಿಸಿದ್ದರು. ಪೆನ್ನಿ ಮೋರ್ಡೆಂಟ್ ಕೇವಲ 26 ನಾಯರ ಬೆಂಬಲ ಪಡೆದರು. ಹೀಗಾಗಿ ಕಣದಿಂದ ಹೊರಬಿದ್ದರು. ಇದರೊಂದಿಗೆ ಭಾರಿ ಬಹುಮತದೊಂದಿದೆ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಬೊರಿಸ್ ಜಾನ್ಸನ್ ಆಡಳಿತದಲ್ಲಿ ರಿಷಿ ಸುನಕ್ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಸಮಯದಲ್ಲಿ ಜಾನ್ಸನ್ ಜನಪ್ರಿಯತೆ ಪಾತಾಳಕ್ಕೆ ಕುಸಿದರೆ, ರಿಷಿ ಸುನಕ್ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಜನಪ್ರಿಯರಾದರು. ಬ್ರಿಟನ್ ಉದ್ಯಮ ಕ್ಷೇತ್ರಕ್ಕೆ ನೆರವು ನೀಡಿದ್ದರು. ಇದೀಗ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅಕ್ಟೋಬರ್ 28ರಂದು ಪದಗ್ರಹಣ ಮಾಡಲಿದ್ದಾರೆ.