ರಾಜ್ಯದಲ್ಲಿ ಬುರ್ಖಾ ನಿಷೇಧಿಸಬೇಕು ಎಂದ ರಿಷಿ ಕುಮಾರ ಸ್ವಾಮಿ

Prasthutha|

ಶ್ರೀರಂಗಪಟ್ಟಣ ಮಸೀದಿ ಒಡೆಯುವುದಾಗಿ ಪುನರುಚ್ಚರಿಸಿದ ಕಾಳಿ ಸ್ವಾಮಿ

- Advertisement -

ಮೈಸೂರು: ರಾಜ್ಯ ಬುರ್ಖಾವನ್ನು ನಿಷೇಧಿಸಬೇಕು ಎಂದು ಕಾಳಿ ಮಠದ ರಿಷಿ ಕುಮಾರ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಕೇವಲ ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ, ದೇಶ ಮತ್ತು ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಇದನ್ನು ಮಾಡಬೇಕು. ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ, ಅಥವಾ  ಅವರ ಅಕ್ಕ, ತಂಗಿ, ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

- Advertisement -

ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ಆ ಜಾಗದಲ್ಲಿ ಹನುಮ ದೇವಸ್ಥಾನ ಕಟ್ಟಬೇಕು ಎಂಬ ನನ್ನ ಈ ಹಿಂದಿನ ಹೇಳಿಕೆಗೆ ನಾನು ಈಗಲೂ ಬದ್ಧ. ಅಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇ ಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಇದೆ ವೇಳೆ ಒತ್ತಾಯ ಮಾಡಿದ್ದಾರೆ.

ರಾಜ್ಯ ಸರ್ಕಾರವು ದೇವಸ್ಥಾನ ಒಡೆದು ಮಸೀದಿ ಕಟ್ಟಿರುವುದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೇಗುಲಗಳನ್ನು ನಾವು ಪತ್ತೆ ಹಚ್ಚುತ್ತೇವೆ. ಅದಕ್ಕಾಗಿ ಸಮಿತಿ ರಚಿಸಿ ನಮಗೆ ರಕ್ಷಣೆ ಕೊಡಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.



Join Whatsapp