ದಿನಗೂಲಿಗಳು, ಸ್ವಂತ ಉದ್ಯೋಗಿಗಳಲ್ಲಿ ಆತ್ಮಹತ್ಯೆ ಪ್ರಮಾಣ ಏರಿಕೆ; ನಿರುದ್ಯೋಗಿಗಳಲ್ಲಿ ಇಳಿಕೆ!

Prasthutha|

ನವದೆಹಲಿ: 2021ರಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ 1,64,033 ಜನರಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬ ದಿನಗೂಲಿ ನೌಕರ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ- ಎನ್ ಸಿಆರ್ ಬಿಯ ಅಂಕಿಅಂಶಗಳಿಂದ ತಿಳಿದುಬಂದಿದೆ.

- Advertisement -

2021ರಲ್ಲಿ ಸ್ವಂತ ಉದ್ಯೋಗ ಮಾಡುವವರಲ್ಲಿಯೂ ಆತ್ಮಹತ್ಯೆಯ ಪ್ರಮಾಣವು ಗಣನೀಯವಾಗಿ ಏರಿಕೆ ಆಗಿದೆ. 

ಎನ್ ಸಿಆರ್ ಬಿಯ ಅಪಘಾತದ ಮತ್ತು ಆತ್ಮಹತ್ಯೆಯ ಸಾವುಗಳ  ವರದಿಯಂತೆ, 2021ರಲ್ಲಿ 42,004 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಒಟ್ಟು ಆತ್ಮಹತ್ಯೆಗೈದವರಲ್ಲಿ 25.6 ಶೇಕಡಾ ಆಗಿದೆ. ಅಂದರೆ ಕಳೆದ ವರ್ಷದ 1,64,033 ಆತ್ಮಹತ್ಯೆಗಳಲ್ಲಿ 422,004 ದಿನಗೂಲಿ ಮಾಡುವವರಾಗಿದ್ದಾರೆ.

- Advertisement -

ಎನ್ ಸಿಆರ್ ಬಿಯು ದತ್ತಾಂಶಗಳನ್ನು ಒಂಬತ್ತು ವೃತ್ತಿಗಳಡಿ ವಿಭಜಿಸಿದೆ. ವಿದ್ಯಾರ್ಥಿಗಳು, ವೃತ್ತಿನಿರತರು/ಸಂಬಳ ಪಡೆಯುವವರು, ದಿನಗೂಲಿ ಪಡೆಯುವವರು, ನಿವೃತ್ತರು, ನಿರುದ್ಯೋಗಿಗಳು, ಸ್ವಂತ ಉದ್ಯೋಗ ಮಾಡುವವರು, ಗೃಹಿಣಿಯರು, ಕೃಷಿ ತೋಟಗಾರಿಕೆ ಇತ್ಯಾದಿಯಾಗಿ ವಿಭಜಿಸಲಾಗಿದೆ.

2020ರಲ್ಲೂ ಆತ್ಮಹತ್ಯೆ ಮಾಡಿಕೊಂಡವರಲ್ಲಿ ದಿನಗೂಲಿಕಾರರ ಸಂಖ್ಯೆಯೇ ಅಧಿಕ. ಒಟ್ಟು ದೇಶದ ಆತ್ಮಹತ್ಯೆಗೈದವರಲ್ಲಿ 1,53,052ರಲ್ಲಿ 37,666 ಎಂದರೆ 24.6 ಶೇಕಡಾ ದಿನಗೂಲಿಕಾರರಾಗಿದ್ದರು.

2021ರಲ್ಲಿ ಒಟ್ಟಂಕಿ ಮಾತ್ರ ಹೆಚ್ಚಾಗಿಲ್ಲ. ಆತ್ಮಹತ್ಯೆಯ ರಾಷ್ಟ್ರೀಯ ಸರಾಸರಿಯು ಕೂಡ ವೇಗವಾಗಿ ಹೆಚ್ಚಳ ಕಂಡಿದೆ.

2021ರಲ್ಲಿ ದೇಶ ಮಟ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯು 2020ಕ್ಕಿಂತ 7.17 ಶೇಕಡಾ ಅಧಿಕವಾಗಿದೆ. ಅಂದರೆ 1,53,052ರಿಂದ 1,64,033ಕ್ಕೆ ಏರಿದೆ. ಆದರೆ ದಿನಗೂಲಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣವು 11.52 ಶೇಕಡಾ ಅಧಿಕವಾಗಿದೆ. 2020ರಲ್ಲಿ 37,666 ಇದ್ದುದು 2021ರಲ್ಲಿ 42,004ಕ್ಕೆ ಏರಿದೆ.

ಆದರೆ 9 ಗುಂಪುಗಳಲ್ಲಿ ಅತಿಯಾದ ಏರಿಕೆ ಆಗಿರುವುದು ಸ್ವಂತ ಉದ್ಯೋಗಿಗಳ ಆತ್ಮಹತ್ಯೆಯಲ್ಲಿ. ವರ್ಷದ ಏರಿಕೆ 16.73 ಶೇಕಡಾವಾಗಿದೆ. ಅವರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 2020ರಲ್ಲಿ 17,322 ಇದ್ದುದು 2021ರಲ್ಲಿ 20,231ಕ್ಕೆ ಏರಿಕೆಯಾಗಿದೆ. ಸ್ವಂತ ಉದ್ಯೋಗಿಗಳಲ್ಲಿ ಕಳೆದ ವರ್ಷ ಇದ್ದ 11.3 ಶೇಕಡಾವು 2021ರಲ್ಲಿ 12.03 ಶೇಕಡಾಕ್ಕೆ ಏರಿಕೆಯಾಗಿದೆ.

ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿರುವುದು ನಿರುದ್ಯೋಗಿಗಳಲ್ಲಿ ಮಾತ್ರ. 2020ರಲ್ಲಿ 15,652 ಇದ್ದುದು 2021ರಲ್ಲಿ 13,714ಕ್ಕೆ ಇಳಿದಿದೆ ಎಂದರೆ 12.38 ಶೇಕಡಾ ಕಡಿಮೆಯಾಗಿದೆ.



Join Whatsapp