ಸಂತ್ರಸ್ತೆ ಹುಣಸೂರಿನ ತೋಟದ ಮನೆಯಲ್ಲಿ ಸಿಕ್ಕಿದ್ದೆಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಸಾ.ರಾ.ಮಹೇಶ್

Prasthutha|

ಮೈಸೂರು: ಹೆಚ್‌.ಡಿ. ರೇವಣ್ಣ ವಿರುದ್ಧದ ಅಪಹರಣ ಪ್ರಕರಣದ ಸಂತ್ರಸ್ತೆ ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು, ಹುಣಸೂರಿನ ತೋಟದ ಮನೆಯಲ್ಲಿ ಅಲ್ಲ. ತೋಟದ ಮನೆಯಲ್ಲಿ ಸಂತ್ರಸ್ತೆ ಸಿಕ್ಕಿದ್ದೆಂದು ಸಾಬೀತು ಮಾಡಿದರೆ ನಾನು ಜೆಡಿಎಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಮಾತ್ರವಲ್ಲ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್, ಸಂತ್ರಸ್ತೆ ಹುಣಸೂರಿನ ರಾಜ ಗೋಪಾಲ್‌ ಅವರ ತೋಟದಲ್ಲಿ ಇರಲಿಲ್ಲ, ಆಕೆ ಹುಣಸೂರು ನಗರದ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಮಹಿಳೆ ಅಪಹರಣದಲ್ಲಿ ಯಾರು ಭಾಗಿಯಾಗಿದ್ದಾರೆ? ಆಕೆಯ ಪುತ್ರನಿಗೆ ಎಷ್ಟು ಹಣ ಸಂದಾಯವಾಗಿದೆ? ದೂರು ಬರೆದುಕೊಟ್ಟವರು ಯಾರು? ಎಲ್ಲಿ ಬರೆದುಕೊಟ್ಟರು? ಇತ್ಯಾದಿ ಎಲ್ಲದರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.



Join Whatsapp