ಮಧ್ಯಪ್ರದೇಶ । ಗಲಭೆ ಪೀಡಿತ ಖಾರ್ಗೋನ್’ನಲ್ಲಿ ನಿವೃತ್ತ ಮುಸ್ಲಿಮ್ ಅಧಿಕಾರಿಗೆ ಪೊಲೀಸರಿಂದ ಹಲ್ಲೆ

Prasthutha|

ಖಾರ್ಗೋನ್: ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಘರ್ಷಣೆಯ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಿದ್ದ ನಡುವೆ ತನ್ನ ಅನುಭವವನ್ನು ಮಾಧ್ಯಮದೊಂದಿಗೆ ಹಂಚಿಕೊಂಡ ನಿವೃತ್ತ ಮುಸ್ಲಿಮ್ ಸಬ್ ಇನ್ಸ್ ಪೆಕ್ಟರ್ ಒಬ್ಬರಿಗೆ ಪೊಲೀಸರು ಗಂಭೀರವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಎಂಬಲ್ಲಿ ನಡೆದಿದೆ.

- Advertisement -

ಘರ್ಷಣೆಯ ಬಳಿಕ ಪೊಲೀಸರು ಹಲವು ಮನೆಗಳನ್ನು ಬುಲ್ಡೋಝರ್ ಬಳಸಿ ಕೆಡವಿ ಹಾಕಿದ್ದರು ಮತ್ತು ಮುಸ್ಲಿಮರನ್ನು ಗುರಿಯಾಗಿಸಿ ಕ್ರೂರವಾಗಿ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಬುಧವಾರ ಮಧ್ಯಾಹ್ನ ಪತ್ರಕರ್ತರ ಮತ್ತು ನಾಗರಿಕರ ಗುಂಪೊಂದು ಖಾರ್ಗೋನ್ ನಲ್ಲಿ ಗಲಭೆಯ ಕುರಿತು ಪ್ರಶ್ನಿಸುತ್ತಿದ್ದ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿವೃತ್ತ ಮುಸ್ಲಿಮ್ ಅಧಿಕಾರಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲಾತಾಣಗಳಲ್ಲಿ ಮತ್ತೊಂದು ವೀಡಿಯೋ ಹರಿದಾಡುತ್ತಿದ್ದು, ಖಾರ್ಗೋನ್’ನ ಶಂಕರ್ ನಗರದ ಬೀದಿಗಳಲ್ಲಿ ಮುಸ್ಲಿಮ್ ಯುವಕರನ್ನು ಪೊಲೀಸ್ ಅಧಿಕಾರಿಗಳು ಕ್ರೂರವಾಗಿ ಥಳಿಸುತ್ತಿರುವ ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಈ ವೈರಲ್ ವೀಡಿಯೋವನ್ನು ಮತ್ತೊಬ್ಬ ಪೊಲೀಸ್ ಅಧಿಕಾರಿ ಚಿತ್ರೀಕರಿಸಿದ್ದು, ಮುಸ್ಲಿಮ್ ಯುವಕರಿಗೆ ಥಳಿಸುವಂತೆ ಸೂಚಿಸುತ್ತಿರುವುದು ಸೆರೆಯಾಗಿದೆ. ಗಲಭೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಆರೋಪಿಸಿ ಪೊಲೀಸರು ಮುಸ್ಲಿಮ್ ಯುವಕರನ್ನು ನಿಂದಿಸಿ ಹಲ್ಲೆ ನಡೆಸಿದ್ದರು.



Join Whatsapp