ರೈಲಿಗೆ ತಲೆಕೊಟ್ಟು ನಿವೃತ್ತ ಉಪನ್ಯಾಸಕ ಆತ್ಮಹತ್ಯೆ

Prasthutha|

ಶಿವಮೊಗ್ಗ: ಜೀವನದಲ್ಲಿ ಜಿಗುಪ್ಸೆಗೊಂಡು ನಿವೃತ್ತ ಉಪನ್ಯಾಸಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

- Advertisement -

ಮೃತಪಟ್ಟ ನಿವೃತ್ತ ಉಪನ್ಯಾಸಕರನ್ನು ವಿಶ್ವನಾಥ್ (70) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದ ವಿಶ್ವನಾಥ್, ನಗರದ ವಿನೋಬನಗರ ಬಡಾವಣೆ ಬಳಿ ತಾಳಗುಪ್ಪ – ಬೆಂಗಳೂರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp