ರಾಜ್ಯವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಕೇರಳ ವಿಧಾನಸಭೆಯಲ್ಲಿ ನಿಲುವಳಿ

Prasthutha|

ತಿರುವನಂತಪುರ: ಕೇರಳವನ್ನು ‘ಕೇರಳಂ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ನಿಲುವಳಿಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ.

- Advertisement -


ಸಂವಿಧಾನದ ಎಂಟನೇ ಪರಿಚ್ಛೇದ ಸೇರಿ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಬೇಕು ಎನ್ನುವ ನಿಲುವಳಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದರು.


ಈ ನಿಲುವಳಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ‘ಯುಡಿಎಫ್’ ಕೂಡ ಯಾವುದೇ ಬದಲಾವಣೆ ಹಾಗೂ ತಿದ್ದುಪಡಿ ಇಲ್ಲದೆ ಒಪ್ಪಿಗೆ ಸೂಚಿಸಿತು.
ನಿಲುವಳಿಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸ್ಪೀಕರ್ ಎ.ಎಮ್ ಶಂಶೀರ್ ಅವರು ಘೋಷಣೆ ಮಾಡಿದರು

Join Whatsapp