ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆ ಸನ್ನಿಹಿತ: ಸ್ಥಳದಲ್ಲಿ 20 ಆಂಬ್ಯುಲೆನ್ಸ್​

Prasthutha|

ಡೆಹ್ರಾಡೂನ್​: ಕುಸಿದ ನಿರ್ಮಾಣ ಹಂತದ ಸುರಂಗದಿಳಗೆ ಹನ್ನೊಂದು ದಿನಗಳಿಂದ ಪರಿತಪಿಸುತ್ತಿರುವ 41 ಮಂದಿ ಕಾರ್ಮಿಕರ ರಕ್ಷಣೆ ಸನ್ನಿಹಿತವಾಗಿದೆ. ನಿರಂತರವಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಹೊರಗೆ ಕರೆತಂದ ತಕ್ಷಣ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸುವ 20 ಆಂಬ್ಯುಲೆನ್ಸ್​ಗಳು ಸ್ಥಳದಲ್ಲಿ ಇರಿಸಲಾಗಿದೆ.

- Advertisement -

ಕಾರ್ಮಿಕರು ಜೀವಂತವಾಗಿದ್ದಾರೆ ಮತ್ತು ಸುರಂಗವನ್ನು ತೆರವುಗೊಳಿಸಿ ಕಾರ್ಮಿಕರನ್ನು ಕಾಪಾಡಲು ಇನ್ನೂ 12 ಮೀಟರ್​ಗಳಷ್ಟೇ ಬಾಕಿ ಇದೆ. ಕಾರ್ಮಿಕರನ್ನು ಹೊರಗೆ ಕರೆತರು ಬೆಡ್​ಗಳನ್ನು ರೆಡಿ ಮಾಡಿಕೊಂಡಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಧಾಮಿ ಘಟನಾ ಸ್ಥಳವನ್ನು ತಲುಪಲಿದ್ದಾರೆ. 41 ಕಾರ್ಮಿಕರಲ್ಲಿ ಜಾರ್ಖಂಡ್ ರಾಜ್ಯಕ್ಕೆ ಸೇರಿದ 15 ಕಾರ್ಮಿಕರು ವೈದ್ಯಕೀಯವಾಗಿ ಫಿಟ್ ಆಗಿದ್ದಾರೆ ಎಂದು ಸರ್ಕಾರ ಘೋಷಿಸಿದ್ದು, ಅವರನ್ನು ವಿಮಾನದಲ್ಲಿ ತವರಿಗೆ ಕರೆತರಲು ಸಕಲ ತಯಾರಿ ಮಾಡಿಕೊಂಡಿದೆ. ಕಾರ್ಮಿಕರನ್ನು ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್​ನಿಂದ ರಾಂಚಿಗೆ ಏರ್​ಲಿಫ್ಟ್​ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.



Join Whatsapp