ಪ್ರಾಣಾಪಾಯಕ್ಕೆ ಸಿಲುಕಿದ ಮಂಗಳೂರಿನ 7 ಮೀನುಗಾರರ ರಕ್ಷಣೆ

Prasthutha|

ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿ ನೀರು ನುಗ್ಗಿ ಪ್ರಾಣಾಪಾಯದಲ್ಲಿದ್ದ ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿರುವ ಘಟನೆ ಕಾರವಾರದ ಬೈತ್ ಖೋಲ್ ಬಂದರಿನಲ್ಲಿ ನಡೆದಿದೆ.

- Advertisement -

ಮಂಗಳೂರಿನ ಏಳು ಮಂದಿ ಮೀನುಗಾರರಿದ್ದ ಮೀನುಗಾರಿಕಾ ಬೋಟ್ ರಾಯಲ್ ಬ್ಲ್ಯೂ, ಕಾರವಾರದ ಬೈತಖೋಲ್ ಬಂದರಿನಿಂದ 40 ನಾಟಿಕಲ್ ಮೈಲು ದೂರದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಅಪಾಯಕ್ಕೆ ಒಳಗಾಗಿತ್ತು. ಪ್ರಾಣಾಪಾಯದಿಂದ ಆತಂಕಕ್ಕೊಳಗಾದ ಮೀನುಗಾರರು ಕರಾವಳಿ ಕಾವಲು ಪೊಲೀಸ್, ಕೋಸ್ಟ್ ಗಾರ್ಡ್ ಗೆ ವಿಷಯ ತಿಳಿಸಿದ್ದಾರೆ. ಬೋಟ್ ಒಳಗಡೆ ನೀರು ನುಗ್ಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಹಾಗೂ ಗೋವಾ ಕೋಸ್ಟ್ ಗಾರ್ಡ್ ರಕ್ಷಣ ಕಾರ್ಯಾಚರಣೆಗೆ ಮುಂದಾಗಿತ್ತು. ಕೊನೆಗೆ ಆರು ಬೋಟ್ ಗಳ ಸಹಾಯದಿಂದ ಮುಳುಗುತ್ತಿದ್ದ ಬೋಟನ್ನು ಎಳೆದು ಕಾರವಾರದ ಬಂದರಿಗೆ ತರಲಾಗಿದೆ.

Join Whatsapp