ವಿರಾಜಪೇಟೆ: ರಸ್ತೆಗೆ ಹುತಾತ್ಮ ಯೋಧ ಅಲ್ತಾಫ್ ಹೆಸರು ನಾಮಕರಣ ಮಾಡಲು ಮನವಿ

Prasthutha|

ವಿರಾಜಪೇಟೆ: ಫೆಬ್ರವರಿ 23 ರಂದು ಕಾಶ್ಮೀರದಲ್ಲಿ ನಿಧನರಾದ ಯೋಧ ಅಲ್ತಾಫ್ ಅಹಮದ್ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವಂತೆ ವಿರಾಜಪೇಟೆ ಪಟ್ಟಣ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಕೆಯಾಗಿದೆ.

- Advertisement -

ವಿರಾಜಪೇಟೆಯ ಮೀನುಪೇಟೆ ನಿವಾಸಿಯಾಗಿದ್ದ ಹವಾಲ್ದಾರ್ ಅಲ್ತಾಫ್ ಅಹಮದ್ ಅವರು ಸುದೀರ್ಘ 19 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ, ಹುತಾತ್ಮರಾಗಿದ್ದು, ಯೋಧನಿಗೆ ಗೌರವ ಸಲ್ಲಿಸುವ ಸಲುವಾಗಿ ಪಟ್ಟಣದ ಮೀನುಪೇಟೆ ರಸ್ತೆ ಅಥವಾ ಮೊಗರಗಲ್ಲಿ ರಸ್ತೆಗೆ ಹುತಾತ್ಮ ಯೋಧನ ಹೆಸರನ್ನು ನಾಮಕರಣ ಮಾಡುವಂತೆ ಎಸ್.ಡಿ.ಪಿ.ಐ ನಗರ ಸಮಿತಿಯ ಅಧ್ಯಕ್ಷ ಶರೀಫ್ ನೇತೃತ್ವದ ತಂಡ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಪದಾಧಿಕಾರಿಗಳಾದ ಸಾಬಿತ್, ಫೈಝಲ್ (ಅಡ್ಡು) ಮತ್ತು ಇಮ್ತಿಯಾಝ್ ಇದ್ದರು.

Join Whatsapp