ಗಣರಾಜ್ಯೋತ್ಸವ ಪರೇಡ್| ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿರುವ ಮಂಗಳೂರಿನ ದಿಶಾ

Prasthutha|

ಮಂಗಳೂರು: ಜ.26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿಯನ್ನು ಮಂಗಳೂರಿನ ತಿಲಕನಗರದ ದಿಶಾ ಅಮೃತ್‌ ಮುನ್ನಡೆಸಲಿದ್ದಾರೆ.

ಅಂಡಮಾನ್‌ ನಿಕೋಬಾರ್‌ನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ದಿಶಾ ಗಣರಾಜ್ಯೋತ್ಸವ ಪರೇಡ್‌ನಲ್ಲಿ ತುಕಡಿಯ ನಾಯಕಿಯಾಗಿ ಹೆಜ್ಜೆಹಾಕಲಿದ್ದಾರೆ.

- Advertisement -

ದಿಶಾ ಮಂಗಳೂರಿನ ಅಮೃತ್ ಕುಮಾರ್‌– ಲೀಲಾ ದಂಪತಿಯ ಪುತ್ರಿಯಾಗಿದ್ದಾರೆ. ಅವರು ನಗರದ ಕೆನರಾ ವಿದ್ಯಾಸಂಸ್ಥೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿ ವರೆಗೆ ವಿದ್ಯಭ್ಯಾಸ ಪಡೆದಿದ್ದಾರೆ. ಬೆಂಗಳೂರು ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿ.ಇ ಪದವಿ ಪಡೆದಿದ್ದಾರೆ.

- Advertisement -