ಪಕ್ಕದಲ್ಲೇ ನಿಂತಿದ್ದ ಹುಡುಗನ ಕಪಾಳಕ್ಕೆ ಬಾರಿಸಿದ ವರದಿಗಾರ್ತಿ !

Prasthutha|

ನವದೆಹಲಿ: ಕ್ಯಾಮೆರಾ ಮುಂದೆ ನಿಂತು ವರದಿ ಮಾಡುವಾಗ ತೊಂದರೆ ಕೊಟ್ಟ ಯುವಕನಿಗೆ ಪಾಕಿಸ್ತಾನ ಮೂಲದ ವರದಿಗಾರ್ತಿ ಕಪಾಳಕ್ಕೆ ಬಾರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ವರದಿಗಾರ್ತಿಯೊಬ್ಬಳು ಜನರ ಮಧ್ಯೆ ಕ್ಯಾಮೆರಾ ಮುಂದೆ ನಿಂತು ವರದಿ ಮಾಡುತ್ತಿರುತ್ತಾರೆ. ಈ ವೇಳೆ ತಾಳ್ಮೆ ಕಳೆದುಕೊಳ್ಳುವ ವರದಿಗಾರ್ತಿ ಪಕ್ಕದಲ್ಲೇ ನಿಂತಿದ್ದ ಹುಡುಗನ ಕಪಾಳಕ್ಕೆ ಬಾರಿಸುತ್ತಾರೆ.
ಪತ್ರಕರ್ತೆ ಕೋಪವನ್ನು ಕಳೆದುಕೊಂಡಿದ್ದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಯುವಕ ಕೆಲವು ಅನಗತ್ಯ ಕಾಮೆಂಟ್ ಮಾಡಿರಬಹುದು ಇದಕ್ಕೆ ವರದಿಗಾರ್ತಿ ಕಪಾಳಕ್ಕೆ ಬಾರಿಸಿರಬಹುದು ಎಂದು ಅಂದಾಜಿಸಲಾಗಿದೆ.

Join Whatsapp