ಖ್ಯಾತ ಮುಸ್ಲಿಮ್ ವಿದ್ವಾಂಸ ಯೂಸುಫ್ ಅಲ್ ಖರ್ಝಾವಿ ನಿಧನ

Prasthutha|

ದೋಹಾ: ಜಾಗತಿಕ ಮುಸ್ಲಿಮ್ ವಿದ್ವಾಂಸ ಮತ್ತು ಮುಸ್ಲಿಮ್ ವಿದ್ವಾಂಸರ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಯೂಸುಫ್ ಖರ್ಝಾವಿ ಅವರು ಸೋಮವಾರ ನಿಧನರಾಗಿದ್ದಾರೆ.

- Advertisement -

ಅವರಿಗೆ 96 ವರ್ಷ ಪ್ರಾಯವಾಗಿದ್ದು, ಅವರ ನಿಧನದ ದುಃಖದ ವಾರ್ತೆಯನ್ನು ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಲಾಗಿದೆ.
ಮೂಲತಃ ಈಜಿಪ್ಟ್’ನ ವಿದ್ವಾಂಸರಾದ ಯೂಸುಫ್ ಅವರು ಸದ್ಯ ಕತಾರ್’ನ ದೋಹಾದಲ್ಲಿ ನೆಲೆಸಿದ್ದಾರೆ. ಸೆಪ್ಟೆಂಬರ್ 9, 1926 ರಂದು ಜನಿಸಿದ ಯೂಸುಫ್, 2013 ರಿಂದ ಕತಾರ್’ನಲ್ಲಿ ನೆಲೆಸಿದ್ದ ಖರ್ಝಾವಿ ಅವರಿಗೆ ಅಲ್ಲಿನ ಪೌರತ್ವವನ್ನು ನೀಡಲಾಗಿತ್ತು.

2004ರಲ್ಲಿ ಸ್ಥಾಪಿತವಾದ ಮುಸ್ಲಿಮ್ ವಿದ್ವಾಂಸರ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು ಮತ್ತು ಸುಮಾರು 14 ವರ್ಷಗಳ ಕಾಲ ಈ ಸ್ಥಾನದಲ್ಲಿ ಮುಂದುವರಿದಿದ್ದರು.

- Advertisement -

ಜಾಗತಿಕವಾಗಿ ಪ್ರಭಾವಿ ಪಂಡಿತರಾಗಿದ್ದ ಯೂಸುಫ್ ಅವರು 120ಕ್ಕೂ ಅಧಿಕ ಕೃತಿಗಳನ್ನು ರಚಿಸಿ, ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ದಿ ಲಾಫುಲ್ ಆ್ಯಂಡ್ ದಿ ಪ್ರೊಹಿಬಿಟೆಡ್ ಇನ್ ಇಸ್ಲಾಮ್ ಮತ್ತು ಇಸ್ಲಾಮ್ ದಿ ಫ್ಯೂಚರ್ ಸಿವಿಲೈಝೇಶನ್ ಪ್ರಮುಖ ಕೃತಿಗಳಾಗಿವೆ.



Join Whatsapp