ನವದೆಹಲಿ: ಮೊಘಲ್ ಚಕ್ರವರ್ತಿಗಳ ರಸ್ತೆಯ ಹೆಸರನ್ನು ಬದಲಾಯಿಸುವಂತೆ ದೆಹಲಿ ಬಿಜೆಪಿ ಘಟಕ ಮಹಾನಗರ ಪಾಲಿಕೆಗೆ ಪತ್ರ ಬರೆದಿದೆ. ದೆಹಲಿ ರಾಜ್ಯ ಬಿಜೆಪಿ ಮುಖಂಡ ಆದೇಶ್ ಗುಪ್ತಾ ಅವರು ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ರಸ್ತೆಗಳ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.
ಇಲ್ಲಿನ ತುಘಲಕ್ ರಸ್ತೆ, ಅಕ್ಬರ್ ರಸ್ತೆ, ಔರಂಗಜೇಬ್ ಲೇನ್, ಷಹಜಹಾನ್ ರಸ್ತೆ ಸೇರಿದಂತೆ ಇನ್ನುಳಿದ ರಸ್ತೆಯ ಹೆಸರುಗಳನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.
ಮೊಘಲ್ ಚಕ್ರವರ್ತಿಗಳ ಹೆಸರನ್ನು ರಸ್ತೆಗೆ ಇಟ್ಟಿರುವುದು ಗುಲಾಮಗಿರಿಯ ಸಂಕೇತವಾಗಿದೆ. ಆದ್ದರಿಂದ ಅದನ್ನು ಬದಲಾಯಿಸಬೇಕು. ನರೇಂದ್ರ ಮೋದಿ ಸರಕಾರವು ಕಾಂಗ್ರೆಸ್ ಅವಧಿಯ ಪಾಪವನ್ನು ಸರಿಪಡಿಸಿದ್ದು, ಕೆಲವು ಇನ್ನೂ ಉಳಿದಿದೆ. ಮುಂದಿನ ದಿನಗಳಲ್ಲಿ ಅದನ್ನೂ ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಅಕ್ರಮಣಕಾರರ ಹೆಸರನ್ನು ರಸ್ತೆಗೆ ಅಳವಡಿಸಲಾಗಿದ್ದು, ಅವರ ಹೆಸರಿನ ರಸ್ತೆ ಭಾರತದಲ್ಲಿ ಯಾಕೆ ಇರಬೇಕು ಎಂದು ಗುಪ್ತಾ ಪ್ರಶ್ನಿಸಿದ್ದಾರೆ.