ದೇಶಕ್ಕೆ ‘ಇಂಡಿಯಾ’ ಹೆಸರು ತೆಗೆದು ಹಾಕಿ: ಬಿಜೆಪಿ ಸಂಸದ

Prasthutha|

ನವದೆಹಲಿ: ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ. ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು. ಅದು ಗುಲಾಮಗಿರಿ ಸಂಕೇತ ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಹೇಳಿದ್ದಾರೆ.

- Advertisement -


ಈ ಬಗ್ಗೆ ರಾಜ್ಯಸಭೆ ಚರ್ಚೆಯಲ್ಲಿ ಮಾತನಾಡಿದ ಅವರು, ಇಂಡಿಯಾ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಪ್ರಖರತೆ ಪಡೆದುಕೊಂಡು ಹೆಸರಾಗಿದೆ. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಸಹಸ್ರಾರು ವರ್ಷಗಳಿಂದ ಇದೆ. ಇಂಡಿಯಾವನ್ನು ಅಧಿಕೃತವಾಗಿ ಭಾರತ ಎಂದು ಹೆಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಇಂಡಿಯಾ ಎಂಬ ಹೆಸರು ಗುಲಾಮಗಿರಿಯ ಸಂಕೇತವೇ ಹೊರತು ಮತ್ತೇನೂ ಎಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Join Whatsapp