ಬೋರ್ಡಿಂಗ್ ನಿರಾಕರಿಸಿದ ಪ್ರಯಾಣಿಕರಿಗೆ ಪರಿಹಾರ: ಷರತ್ತು ವಿಧಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ

Prasthutha|

ನವದೆಹಲಿ: ಮಾನ್ಯ ಟಿಕೆಟ್ ಹೊಂದಿರುವ ಮತ್ತು ಸಮಯಕ್ಕೆ ಸರಿಯಾಗಿ ಹಾಜರಾದ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ಷರತ್ತುಗಳನ್ನು ವಿಧಿಸಿದೆ.

- Advertisement -

ಡಿಜಿಸಿಎ ಷರತ್ತುಗಳಿಗೆ ಸಂಬಂಧಿಸಿದಂತೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಒಂದು ವೇಳೆ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಒಂದು ಗಂಟೆಯೊಳಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲು ಸಾಧ್ಯವಾದರೆ, ಯಾವುದೇ ಪರಿಹಾರವನ್ನು ಪಾವತಿಸಲಾಗುವುದಿಲ್ಲ ಎಂದು ಡಿಜಿಸಿಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಆದಾಗ್ಯೂ, ಮುಂದಿನ 24 ಗಂಟೆಗಳಲ್ಲಿ ವಿಮಾನಯಾನ ಸಂಸ್ಥೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವಾದರೆ, 10,000 ರೂ.ಗಳವರೆಗೆ ಪರಿಹಾರವನ್ನು ಸೂಚಿಸಲಾಗುತ್ತದೆ ಎಂದು ಅದು ಹೇಳಿದೆ.

24 ಗಂಟೆಗಳಿಗಿಂತ ಹೆಚ್ಚಿನ ಯಾವುದಕ್ಕೂ 20,000 ರೂ.ಗಳವರೆಗೆ ಪರಿಹಾರವನ್ನು ನಿಗದಿಪಡಿಸಲಾಗಿದೆ ಎಂದು ಅದು ತಿಳಿಸಿದೆ.



Join Whatsapp