ಕಂಗನಾ ಬಂಗ್ಲೆ ಕೆಡವಿದ ಆದೇಶ ರದ್ದುಪಡಿಸಿದ ಬಾಂಬೆ ಹೈಕೊರ್ಟ್ | ನಟಿಗೆ ಪರಿಹಾರ

Prasthutha|

ಮುಂಬೈ : ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ದಾಟಿಯಲ್ಲಿ ಮಾತನಾಡುತ್ತಿರುವ ನಟಿ ಕಂಗನಾ ರಣಾವತ್ ಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಸಮಾಧಾನಕರ ತೀರ್ಪೊಂದನ್ನು ಜಾರಿಗೊಳಿಸಿದೆ. ಸೆ.9ರಂದು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ ನಟಿ ಕಂಗನಾ ವಿರುದ್ಧ ಜಾರಿಗೊಳಿಸಿದ್ದ, ಬಾಂದ್ರಾ ಕಚೇರಿ ತೆರವು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

- Advertisement -

ನ್ಯಾ. ಎಸ್.ಜೆ. ಕಥಾವಾಲ ಮತ್ತು ನ್ಯಾ. ಆರ್.ಐ. ಚಗ್ಲಾ ನ್ಯಾಯಪೀಠ ಆದೇಶವನ್ನು ರದ್ದುಗೊಳಿಸುತ್ತಾ, ಬಿಎಂಸಿಯ ದುರುದ್ದೇಶಪೂರಿತ ಕ್ರಮದಿಂದಾಗಿ ಕಂಗನಾಗೆ ಪರಿಹಾರ ಪಡೆಯುವ ಅರ್ಹತೆಯಿದೆ ಎಂದು ಅಭಿಪ್ರಾಯ ಪಟ್ಟಿದೆ.

ನಾಗರಿಕ ಹಕ್ಕುಗಳ ವಿರುದ್ಧ ತಪ್ಪು ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ಕಾನೂನಿನ ದುರುಪಯೋಗವಲ್ಲದೆ ಬೇರೇನೂ ಅಲ್ಲ. ಯಾವುದೇ ನಾಗರಿಕನ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ಬಳಸುವುದು ಒಪ್ಪಲಾಗದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

- Advertisement -

ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಸೆಪ್ಟಂಬರ್ ನಲ್ಲಿ ರಣಾವತ್ ಬಂಗ್ಲೆಯಿದ್ದ ಕಚೇರಿಯ ಭಾಗವನ್ನು ಧ್ವಂಸಗೊಳಿಸಿತ್ತು. ಆಡಳಿತಾರೂಢ ಶಿವಸೇನೆ ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ಧ ಹೇಳಿಕೆಗಳನ್ನು ನೀಡಿರುವುದಕ್ಕೆ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ ಎಂದು ಕಂಗನಾ ಆರೋಪಿಸಿದ್ದರು.  



Join Whatsapp