ಹೊಸದಿಲ್ಲಿ: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಶುಕ್ರವಾರ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶದ ನಂತರ ಯಾವುದೇ ಕಂಪನಿಯೊಂದಿಗೆ ಕೆಲಸ ಮಾಡದಂತೆ ಅವರನ್ನು ನಿರ್ಬಂಧಿಸಲಾಗಿದೆ.
“ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಮಧ್ಯಂತರ ಆದೇಶದ ಪಾಲನೆಗಾಗಿ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಿಲ್ ಡಿ ಅಂಬಾನಿ ರಿಲಯನ್ಸ್ ಪವರ್ ಮಂಡಳಿಯಿಂದ ಕೆಳಗಿಳಿಯುತ್ತಾರೆ” ಎಂದು ರಿಲಯನ್ಸ್ ಪವರ್ ಬಿಎಸ್ ಇ ಫೈಲಿಂಗ್ ನಲ್ಲಿ ತಿಳಿಸಿದೆ.
ಸೆಬಿ ಫೆಬ್ರವರಿಯಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರು ವ್ಯಕ್ತಿಗಳನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಕಂಪನಿಯಿಂದ ಹಣವನ್ನು ಉಪಯೋಗಿಸಿಕೊಂಡ ಆರೋಪದ ಮೇಲೆ ನಿರ್ಬಂಧಿಸಿತ್ತು.