2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಅಲಂಕರಿಸಿದ ರಿಲಯನ್ಸ್ ಕಂಪೆನಿ

Prasthutha|

ದೆಹಲಿ: 2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ರಿಲಯನ್ಸ್ ಕಂಪೆನಿಯು 20ನೇ ಸ್ಥಾನವನ್ನು ಅಲಂಕರಿಸಿದೆ.

- Advertisement -

ಫೋಬ್ಸ್‌ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿರುವ ರಿಲಾಯನ್ಸ್ ಲಿಮಿಟೆಡ್ ಕಂಪೆನಿಯು ಇಪ್ಪತ್ತನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಮೈಕ್ರೊಸಾಫ್ಟ್‌, ಐಬಿಎಂ, ಆಲ್ಫಾಬೆಟ್ ಮತ್ತು ಆ್ಯಪಲ್‌ ಕಂಪನಿಗಳು ನಂತರದ ಸ್ಥಾನಗಳನ್ನು ಅಲಂಕರಿಸಿದೆ.

- Advertisement -

ಜರ್ಮನಿ ಮೂಲದ ಬಿಎಂಡಬ್ಲ್ಯು 13ನೇ ಸ್ಥಾನದಲ್ಲಿದೆ. ಅಮೆಜಾನ್‌ ಮಾರಾಟ ಕಂಪೆನಿ 14ನೇ ಸ್ಥಾನ ಪಡೆದುಕೊಂಡಿದೆ.

Join Whatsapp