ಬೆಂಗಳೂರು: ಕನ್ನಡ ರಣಧೀರರ ಪಡೆ ರಾಜ್ಯ ಸಮಿತಿ “ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳ ಫೆಲೋಶಿಫ್ ಬಿಡುಗಡೆ ಹಾಗೂ ಹಂಪಿ ವಿವಿ ಉಳಿಸಲು” ಕರೆ ನೀಡಿದ್ದ ಭಿತ್ತಿ ಪತ್ರ ಚಳವಳಿ ರಾಜ್ಯದ ಉದ್ದಗಲಕ್ಕೂ ಸಂಚಲನ ಸೃಷ್ಟಿಸಿದೆ.
ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಯಾದಗಿರಿ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ, ಕಲುಬುರ್ಗಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರಿಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮದ ಜೊತೆಜೊತೆಗೆ ಯುವಜನತೆ, ವಿದ್ಯಾರ್ಥಿಗಳು, ರೈತರು,ಮಹಿಳೆಯರು,ಅಭಿಯಾನದಲ್ಲಿ ಭಾಗಿಯಾಗಿ ರಾಜ್ಯಾದ್ಯಂತ 500 ಕ್ಕೂ ಅಧಿಕ ಭಿತ್ತಿಪತ್ರ ಚಳವಳಿ ನಡೆಯಿತು.
ರಾಜ್ಯ ಸರ್ಕಾರ,ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಈ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಅವರ ನಿವಾಸಕ್ಕೆ ಕನ್ನಡ ರಣಧೀರರ ಪಡೆಯ ವತಿಯಿಂದ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ರಣಧೀರರ ಪಡೆಯ ರಾಜ್ಯ ಕಾರ್ಯಾಧ್ಯಕ್ಷ ವೆಂಕಟೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ