ದೆಹಲಿ ಗಲಭೆ ಕೇಸ್‌ : ವಿದ್ಯಾರ್ಥಿ ನಾಯಕರಾದ ದೇವಾಂಗನಾ ಕಲಿತಾ, ನತಾಶಾ, ಆಸಿಫ್‌ ತಕ್ಷಣ ಬಿಡುಗಡೆಗೆ ಕೋರ್ಟ್‌ ಆದೇಶ

Prasthutha|

ನವದೆಹಲಿ : ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಜೈಧಿಸಿದ ಕಠಿಣ ಕಾನೂನಿನ ಮೂಲಕ ಜೈಲು ಪಾಲಾಗಿದ್ದ ಮೂವರು ವಿದ್ಯಾರ್ಥಿ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯವೊಂದು ಆದೇಶಿಸಿದೆ. ವಿದ್ಯಾರ್ಥಿ ನಾಯಕರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್‌, ಆಸಿಫ್‌ ಇಕ್ಬಾಲ್‌ ತನ್ಹಾ ಅವರ ಬಿಡುಗಡೆಗೆ ಹೈಕೋರ್ಟ್‌ ಜಾಮೀನು ನೀಡಿತ್ತಾದರೂ, ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್‌ ಈ ಆದೇಶ ನೀಡಿದೆ.

- Advertisement -

ಕಳೆದ ವರ್ಷದ ಮೇ ತಿಂಗಳಿನಿಂದ ಜೈಲಿನಲ್ಲಿರುವ ವಿದ್ಯಾರ್ಥಿ ನಾಯಕರಿಗೆ ಮಂಗಳವಾರ ದೆಹಲಿ ಹೈಕೋರ್ಟ್‌ ಜಾಮೀನು ನೀಡಿದ್ದರೂ, ಅವರನ್ನು ಇನ್ನೂ ಬಿಡುಗಡೆಗೊಳಿಸದೆ ಜೈಲಿನಲ್ಲಿರಿಸಲಾಗಿದೆ.

ಜಾಮೀನು ಸಾಕ್ಷಿಗಳ ವಿಳಾಸ ಪರಿಶೀಲನೆಗೆ ಇನ್ನೂ ಮೂರು ದಿನಗಳನ್ನು ನೀಡುವಂತೆ ಕೋರಿ ದೆಹಲಿ ಪೊಲೀಸರು ನಿನ್ನೆ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ರವೀಂದರ್‌ ಬೇಡಿ ವಜಾಗೊಳಿಸಿದ್ದಾರೆ. ಹೈಕೋರ್ಟ್‌ ಈಗಾಗಲೇ ಜಾಮೀನು ನೀಡಿದೆ ಮತ್ತು ತಿಹಾರ್‌ ಜೈಲಿಗೆ ಈಗಾಗಲೇ ಬಿಡುಗಡೆ ಆದೇಶ ರವಾನೆಯಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

- Advertisement -

ಇಂದು ಸಂಜೆ ಐದು ಗಂಟೆ ವೇಳೆಗೆ ವಿದ್ಯಾರ್ಥಿ ಮುಖಂಡರು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇನ್ನೊಂದೆಡೆ, ಇವತ್ತಿನ ಆದೇಶಕ್ಕೂ ಕೆಲವು ಗಂಟೆಗಳ ಮೊದಲು ಮೂವರು ವಿದ್ಯಾರ್ಥಿ ನಾಯಕರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿ, ವಿಳಂಬದ ಬಗ್ಗೆ ಕೋರ್ಟ್‌ ಗಮನಕ್ಕೆ ತಂದಿದ್ದಾರೆ. ವ್ಯ

ಇಪ್ಪತ್ತ ನಾಲ್ಕು ಗಂಟೆಗಿಂತಲೂ ಹೆಚ್ಚು ಕಾಲ ಸಾಕ್ಷಿಗಳ ಪರಿಶೀಲನೆಗೆ ತೆಗೆದುಕೊಳ್ಳುವುದು ಕಾನೂನು ಬಾಹಿರ ಎಂದಿರುವುದರಿಂದ, ತಮ್ಮನ್ನು ಬಿಡುಗಡೆಗೊಳಿಸುವಂತೆ ಆದೇಶಿಸಲು ನಿರ್ದೇಶಿಸುವಂತೆ ಅವರು ಮನವಿ ಸಲ್ಲಿಸಿದ್ದಾರೆ.

ವಿಷಯ ತಿಳಿದು ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ಆಧಾರ್‌ ನಂಬರ್‌ ಪರಿಶೀಲನೆ ಯಾಕೆ ಬೇಕು? ಎಂದು ಪೊಲೀಸರನ್ನು ಪ್ರಶ್ನಿಸಿದೆ.  ಮಧ್ಯಾಹ್ನ 3:30ರ ನಂತರ ವಿಚಾರಣೆ ಮುಂದುವರಿಯಲಿದೆ.



Join Whatsapp