ಪತ್ರಕರ್ತ ಸಿದ್ದೀಕ್ ಕಾಪ್ಪನ್ ಬಿಡುಗಡೆಗೆ ಅಮೆರಿಕದ ಪತ್ರಕರ್ತರ ಸಮಿತಿ ಒತ್ತಾಯ

Prasthutha|

ನವದೆಹಲಿ : ಹಥ್ರಾಸ್ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಸಂದರ್ಭ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ಬಂಧಿಸಿರುವುದಕ್ಕೆ ಅಮೆರಿಕ ಮೂಲದ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಕಳವಳ ವ್ಯಕ್ತಪಡಿಸಿದೆ. ಪತ್ರಕರ್ತ ಸಿದ್ದೀಕ್ ಕಾಪ್ಪನ್ ಬಂಧನ ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.

- Advertisement -

ಕಾಪ್ಪನ್ ಬಿಡುಗಡೆಗೆ ಸಮಿತಿ ಒತ್ತಾಯಿಸಿದೆ. ಅ.5ರಂದು ಹಥ್ರಾಸ್ ಬಾಲಕಿಯ ಕುಟುಂಬವನ್ನು ಭೇಟಿಯಾಗಲು ತೆರಳಿದ್ದ ಇತರರೊಂದಿಗೆ ಪತ್ರಕರ್ತ ಕಾಪ್ಪನ್ ಅವರನ್ನೂ ಬಂಧಿಸಲಾಗಿತ್ತು. ಅವರ ವಿರುದ್ಧ ಭಯೋತ್ಪಾದನೆ ತಡೆಗಾಗಿ ಬಳಸಲ್ಪಡುವ ಕಠಿಣ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ ಪ್ರಕರಣದಲ್ಲಿ, ಜಾಮೀನು ಮಂಜೂರು ಮಾಡುವಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ಕೋರ್ಟ್ ಪ್ರತಿಪಾದಿಸಿತ್ತು. ಆದರೆ, ಕಾಪ್ಪನ್ ಬಂಧನದ ವಿಷಯದ ಕುರಿತು ನ್ಯಾಯವಾದಿ ಕಪಿಲ್ ಪ್ರಸ್ತಾಪಿಸಿದಾಗ ಕೋರ್ಟ್ ಮೌನವಾಗಿತ್ತು.  



Join Whatsapp