RSS ಪ್ರೇರಿತ ಪಠ್ಯ ತಿರಸ್ಕಾರ, ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆಗೆ ಆಗ್ರಹಿಸಿ ಟ್ವಿಟ್ಟರ್ ಟ್ರೆಂಡಿಂಗ್

Prasthutha|

ಬೆಂಗಳೂರು: RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕಾರ, ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆಯನ್ನು ತೊರೆಯಬೇಕು ಎಂದು ಆಗ್ರಹಿಸಿ ಟ್ವಿಟ್ಟರ್ ನಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, #RejectRSSTextBooks #RejectBrahminTextBooks ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗುತ್ತಿದೆ.

- Advertisement -

ಪ್ರಸಕ್ತ ಸಾಲಿನ ಪಠ್ಯ ಪುಸ್ತಕ ಸಮಿತಿ ಇರುವವರು ಬ್ರಾಹ್ಮಣರೇ ಆಗಿದ್ದಾರೆ. ಸುಮಾರು 9 ಮಂದಿ ಬ್ರಾಹ್ಮಣ ಲೇಖಕರ ಪಠ್ಯವನ್ನು ಹೊಸದಾಗಿ ಸೇರಿಸಲಾಗಿದೆ. ಇದರಲ್ಲಿ 6 ಜನ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಸದಾ ಸುಳ್ಳನ್ನೇ ಬಂಡವಾಳವನ್ನಾಗಿಸಿದ ಚಕ್ರವರ್ತಿ ಸೂಲಿಬೆಲೆ ಪಠ್ಯ ಸೇರಿಸುವ ಮೂಲಕ ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೀರಿ? ಎಂದು ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡುತ್ತಿದ್ದವನನ್ನು ಪಠ್ಯ ಪರಿಷ್ಕರಣ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿದಾಗಲೇ ರಾಜ್ಯದ ಮರ್ಯಾದೆ ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಟ್ವಿಟರ್‌ನಲ್ಲಿ #RejectRSSTextBooks #RejectBrahminTextBooks ಹ್ಯಾಷ್‌ಟ್ಯಾಗ್‌ಗಳು 10 ಸಾವಿರಕ್ಕೂ ಹೆಚ್ಚು ಟ್ವೀಟ್ ಆಗಿದ್ದು, ಭಾರತ ಮಟ್ಟದಲ್ಲಿ ಟ್ರೆಂಡ್ ಆಗುತ್ತಿವೆ.

ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು #RejectRSSTextBooks #RejectBrahminTextBooks ಎಂದು ಹಿರಿಯ ಚಿಂತಕರು ಮತ್ತು ಜೆಎನ್‌ಯು ಕನ್ನಡ ಪೀಠದ ಅಧ್ಯಕ್ಷರಾಗಿದ್ದ ಪುರುಷೋತ್ತಮ ಬಿಳಿಮಲೆಯವರು ಬರೆದಿದ್ದಾರೆ.

- Advertisement -

ಕನ್ನಡ ಮಕ್ಕಳು ಓದಬೇಕಿರುವುದು ಸಿದ್ದಲಿಂಗಯ್ಯನವರ ಬಂಡಾಯದ ಹಾಡುಗಳನ್ನು. ಸಂಸ್ಕಾರದ ಹೆಸರಲ್ಲಿ ಬರೀ ವೈದಿಕ ಆಚರಣೆಗಳು, ನಂಬಿಕೆಗಳನ್ನೇ ಕನ್ನಡ ಮಕ್ಕಳಿಗೆ ಕಲಿಸಿದರೆ ಅದು ತಪ್ಪು. ಸಂಸ್ಕಾರ ಬರೀ ಬ್ರಾಹ್ಮಣರಿಗಶ್ಟೇ ಇದೆಯಾ? ಇದೊಂದು ಹೊಣೆಗೇಡಿ ಪುರೋಹಿತಶಾಹಿ ಸರಕಾರ ಎಂದು ಚೈತನ್ಯ ಗೌಡ ಎಂಬುವವರು ಟ್ವೀಟ್ ಮಾಡಿದ್ದಾರೆ.
ಅರವಿಂದ ಮಾಲಗತ್ತಿಯವರ ಪದ್ಯವನ್ನು ಕಿತ್ತುಹಾಕಲಾಗಿದೆ ಎಂಬುದಷ್ಟೇ ಮುಖ್ಯ ವಿಷಯವಲ್ಲ, ಕಿತ್ತು ಹಾಕಿರುವುದು ಬುದ್ಧನ ಕುರಿತ ಪದ್ಯ. ಕ್ರೂರ ಜನಾಂಗೀಯವಾದಿಗಳಷ್ಟೇ ಹೀಗೆ ಮಾಡಬಲ್ಲರು ಎಂದು ಹೋರಾಟಗಾರರಾದ ದಿನೇಶ್ ಕುಮಾರ್ ಎಂಬವರ ಟ್ವೀಟ್ ಗಮನ ಸೆಳೆದಿದೆ.
ಸರ್ವಜನಾಂಗದ ಶಾಂತಿಯ ಬೀಡಾದ ಕರ್ನಾಟಕದ ಮಕ್ಕಳಿಗೆ ಒಳ್ಳೆಯ ಪಠ್ಯಪುಸ್ತಕ ಕೊಡುವಂಥ ಬಲಪಂಥೀಯ ವಿದ್ವಾಂಸರನ್ನು ಹುಡುಕಲು ಸರಕಾರಕ್ಕೆ ಅಸಾಧ್ಯವಾದುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುವುದೇ? ಚಕ್ರತೀರ್ಥ ಬಿಟ್ಟರೆ ಅವರಲ್ಲಿ ಯಾರೂ ಇಲ್ಲವೇ? ಎಂದು ಬಹುತ್ವ ಕರ್ನಾಟಕ ಸಂಘಟನೆ ತನ್ನ ಟ್ವೀಟ್ ನಲ್ಲಿ ಪ್ರಶ್ನಿಸಿದೆ.

Join Whatsapp