ಸಿಜೆಐ ಕುರಿತ ಟ್ವೀಟ್ ನ ‘ತಪ್ಪಿಗೆ ವಿಷಾಧಿಸುತ್ತೇನೆ’ : ಪ್ರಶಾಂತ್ ಭೂಷಣ್

Prasthutha|

ನವದೆಹಲಿ : ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಕುರಿತ ಅ.21ರ ತಮ್ಮ ಟ್ವೀಟ್ ನಲ್ಲಿ ‘ತಪ್ಪು’ ಆಗಿರುವುದಕ್ಕೆ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿಷಾಧ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶ ಸರಕಾರದ ವಿಶೇಷ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದುದಕ್ಕೆ ಸಂಬಂಧಿಸಿ ನ್ಯಾ. ಬೋಬ್ಡೆ ಕುರಿತು ಭೂಷಣ್ ಟ್ವೀಟ್ ಮಾಡಿದ್ದರು.

ಮಧ್ಯಪ್ರದೇಶದ ಪಕ್ಷಾಂತರಿ ಶಾಸಕರ ಅನರ್ಹತೆ ಕುರಿತ ಪ್ರಕರಣ ತಮ್ಮ ಬಳಿಯಿರುವಾಗ, ಸಿಜೆಐ ಅವರು ಮಧ್ಯಪ್ರದೇಶ ಸರಕಾರದ ವಿಶೇಷ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದುದು ತಪ್ಪು ಎಂಬರ್ಥದಲ್ಲಿ ಭೂಷಣ್ ಟ್ವೀಟ್ ಮಾಡಿದ್ದರು. ಆದರೆ, ಈಗ ಮತ್ತೊಂದು ಟ್ವೀಟ್ ಮಾಡಿರುವ ಅವರು, ತಮ್ಮ ಈ ಹಿಂದಿನ ಟ್ವೀಟ್ ನಲ್ಲಿ ಆಗಿರುವ ತಪ್ಪಿಗೆ ‘ವಿಷಾಧಿಸುತ್ತೇನೆ’ ಎಂದಿದ್ದಾರೆ.

- Advertisement -

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಸರಕಾರದಲ್ಲಿ ಸಚಿವರಾಗಿರುವ ಶಾಸಕರ ಸ್ಥಾನಗಳಿಗೆ ನಿನ್ನೆ ಮತದಾನ ನಡೆದಿದೆ. ಶಿವರಾಜ್ ಅವರ ಸರಕಾರದ ಅಳಿವು ಉಳಿವು ಚುನಾವಣೆಯಲ್ಲಿ ಇವರೆಲ್ಲರ ಮರು ಆಯ್ಕೆಯಲ್ಲಿದೆಯೇ ಹೊರತು, ಸಿಜೆಐ ಕೋರ್ಟ್ ಮುಂದಿರುವ, ಅವರ ಸಚಿವಸ್ಥಾನವನ್ನು ಪ್ರಶ್ನಿಸಿರುವ ಪ್ರಕರಣದಲ್ಲಿಲ್ಲ. ನಾನು ನನ್ನ ಈ ಹಿಂದಿನ ಟ್ವಿಟ್ ನಲ್ಲಾಗಿರುವ ತಪ್ಪಿಗೆ ವಿಷಾಧಿಸುತ್ತೇನೆ ಎಂದು ಭೂಷಣ್ ಟ್ವೀಟ್ ಮಾಡಿದ್ದಾರೆ.  

- Advertisement -