ಹಳಿ ಮೇಲೆ ರೀಲ್ಸ್| ರೈಲು ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತ್ಯು

Prasthutha|

ಫಿರೋಜಾಬಾದ್:  ರೈಲ್ವೇ ಹಳಿ‌ಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ಸಂದರ್ಭ ರೈಲೊಂದು ಡಿಕ್ಕಿ ಹೊಡೆದು ಯುವಕರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಫಿರೋಜಾಬಾದ್ ಪಟ್ಟಣದ ರೂಪಸ್‌ಪುರ ಗೇಟ್‌ ಬಳಿ ನಡೆದಿದೆ.

- Advertisement -

ಕಿವಿಗೆ ಏರ್​​​ಫೋನ್​​​ ಹಾಕಿಕೊಂಡು ರೀಲ್ಸ್  ಮಾಡುತ್ತಿದ್ದಾಗ ರಾಜಧಾನಿ ರೈಲು ಡಿಕ್ಕಿ ಹೊಡೆದು ಯುವಕರಿಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೈನ್‌ಪುರಿಯ ಬರ್ನಾಹಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಭಿಕನ್‌ಪುರ ಗ್ರಾಮದ ಕರಣ್ ಹಾಗೂ ಆತನ ಸ್ನೇಹಿತ ಶಶಾಂಕ್ ಮೃತಪಟ್ಟವರು.

- Advertisement -

ರೂಪಸ್‌ಪುರ ಗೇಟ್‌ ಬಳಿ ಇವರಿಬ್ಬರೂ ರೀಲ್​ ಮಾಡುತ್ತಿದ್ದಾಗ ಏಕಾಏಕಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಬಂದಿದ್ದರಿಂದ ಅವರಿಗೆ ಗೊತ್ತಾಗಿಲ್ಲ. ಇದ್ದಕ್ಕಿದಂತೆ ಇಬ್ಬರು ಯುವಕ ಮೇಲೆ ರೈಲು ಹರಿದಿದೆ. ಈ ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರ ಮೃತದೇಹಗಳನ್ನು ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ

Join Whatsapp