ಇಳಿಕೆಯಾದ ಕೋವಿಡ್ ಪ್ರಕರಣ; ಇ-ವೀಸಾ ಪುನಸ್ಥಾಪನೆ

Prasthutha|

ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದ್ದ 156 ದೇಶಗಳ ಪ್ರವಾಸಿಗರ ಇ-ವೀಸಾವನ್ನು ಕೇಂದ್ರ ಸರ್ಕಾರ ಮರುಸ್ಥಾಪಿಸಿದ್ದು, ಎಲ್ಲಾ ದೇಶಗಳಿಗೆ ಅನ್ವಯವಾಗುವ ಸಾಮಾನ್ಯ ವೀಸಾಗಳನ್ನೂ ತಕ್ಷಣದಿಂದ ಊರ್ಜಿತಗೊಳಿಸಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ .

- Advertisement -

ಅಮೆರಿಕ ಮತ್ತು ಜಪಾನ್‌ ಪ್ರಜೆಗಳಿಗೆ ಹತ್ತು ವರ್ಷಗಳ ಅವಧಿಗೆ ನೀಡಲಾಗುವ ಪ್ರವಾಸಿ ವೀಸಾಗಳನ್ನೂ ಮರುಸ್ಥಾಪಿಸಲಾಗಿದೆ. ಇ-ವೀಸಾಗಳನ್ನು ಐದು ವರ್ಷಗಳ ಅವಧಿಗೆ ನೀಡಲಾಗುತ್ತಿದ್ದು, ಸೋಂಕಿನ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ರದ್ದುಗೊಳಿಸಲಾಗಿತ್ತು.

156 ರಾಷ್ಟ್ರಗಳ ಪ್ರಜೆಗಳಿಗೆ 2019 ವೀಸಾ ನಿಯಮಗಳ ಅನ್ವಯ ಹೊಸ ಇ-ವೀಸಾ ಪಡೆಯಲು ಅರ್ಹರಾಗಿರುತ್ತಾರೆ. ಸಾಮಾನ್ಯ ವೀಸಾ (ಪೇಪರ್‌ ವೀಸಾ)ವನ್ನೂ ಮುಂದುವರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Join Whatsapp