ಮೊದಲು ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿ: ಪ್ರಧಾನಿಗೆ ಸುರ್ಜೇವಾಲಾ ತಿರುಗೇಟು

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಮೊದಲು ಪೆಟ್ರೋಲ್ ಬೆಲೆ ಕಡಿಮೆ ಮಾಡಿ ನಂತರ ಬೇರೆ ರಾಜ್ಯದ ಬಗ್ಗೆ ಮಾತನಾಡಿ ಎಂದು
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿರುಗೇಟು ನೀಡಿದ್ದಾರೆ.

- Advertisement -

ಪ್ರಧಾನಿಯವರು ರಾಜಸ್ತಾನ, ಛತ್ತೀಸ್ ಘಡ, ತಮಿಳುನಾಡು ಇನ್ನಿತರ ಬಿಜೆಪಿಯೇತರ ರಾಜ್ಯಗಳ ಬಗ್ಗೆ ಹೇಳಿದ್ದಾರೆ. ಪೆಟ್ರೋಲ್ ಬೆಲೆ ಕಡಿಮೆ ಮಾಡುವಂತೆ ಮಾತನಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಎಂದು ಹೇಳಿದ್ದಾರೆ.


ಭ್ರಷ್ಟಾಚಾರದ ಬಗ್ಗೆ ಮೊದಲು ಮಾತನಾಡಿ, ಪೆಟ್ರೋಲ್ ದರ ಇಳಿಕೆಗೆ ನಾವು ಒತ್ತಾಯಿಸಿದ್ದೆವು. ಪೆಟ್ರೋಲ್ ಮೇಲಿನ ಸೆಸ್ ಯಾವಾಗ ಕಡಿಮೆ ಮಾಡುತ್ತೀರಿ? ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ ಎಷ್ಟಿತ್ತು? ಈಗ ಎಷ್ಟಿದೆ? ಅದನ್ನು ಯಾವಾಗ ಕಡಿಮೆ ಮಾಡುತ್ತೀರಿ? 27 ಲಕ್ಷ ಕೋಟಿ ಸೆಸ್ ನಿಂದ ಸಂಗ್ರಹ ಮಾಡಲಾಗಿದೆ. ನೀವು ಅಧಿಕಾರಕ್ಕೆ ಬಂದಾಗಿನಿಂದ ಮಾಡಿದ್ದೀರಾ? ಗ್ಯಾಸ್ ಸಿಲಿಂಡರ್ ಬೆಲೆ 480 ರೂ ಇತ್ತು. ಈಗ ಗ್ಯಾಸ್ ಬೆಲೆ 1000 ರೂಗೆ ಬಂದಿದೆ.ಈ ದರ ಏರಿಕೆ ಸಾಮಾನ್ಯಜನರಿಗೆ ಹೊರೆಯಾಗಿದೆ. 150 ಕೋಟಿ ಇದರಲ್ಲಿ ಕಲೆಕ್ಟ್ ಮಾಡಲಾಗಿದೆ. ಸಬ್ಸಿಡಿಯನ್ನ ನೀವು ತೆಗೆದಿದ್ದೀರಿ, ಅದನ್ನ ಯಾವಾಗ ಕಡಿಮೆ ಮಾಡುತ್ತೀರಿ? ಕೆಲವು ರಾಜ್ಯಗಳು ತೆರಿಗೆಯನ್ನೇ ತೆಗೆದಿವೆ. ನೀವು ಯಾಕೆ ಕೇಂದ್ರದ ಸೆಸ್ ಕಡಿಮೆ ಮಾಡುತ್ತಿಲ್ಲ”ಎಂದು ಪ್ರಶ್ನಿಸಿದ್ದಾರೆ.



Join Whatsapp