ಶೀಘ್ರದಲ್ಲೇ ಮಾದಕವಸ್ತು, ಸ್ಫೋಟಕ ಪತ್ತೆಗೆ ಭಾರತೀಯ ತಳಿ ನಾಯಿಗಳ ನೇಮಕ

Prasthutha|

- Advertisement -

ನವದೆಹಲಿ : ಪ್ರಸ್ತುತ ಶಂಕಿತರು, ಮಾದಕವಸ್ತುಗಳು ಮತ್ತು ಸ್ಫೋಟಕಗಳನ್ನ ಪತ್ತೆಹಚ್ಚುವುದಕ್ಕೆ
ನಿಯೋಜಿಸಲಾದ ಬಹುತೇಕ ಪೊಲೀಸ್ ನಾಯಿಗಳು ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಬೆಲ್ಜಿಯಂ ಮಾಲಿನೋಯಿಸ್ ಮತ್ತು ಕಾಕರ್ ಸ್ಪ್ಯಾನಿಯಲ್ನಂತಹ ವಿದೇಶಿ ತಳಿಗಳಾಗಿವೆ. ಇನ್ನು ಮುಂದೆ ಬಿಎಸ್‌ಎಫ್, ಸಿಆರ್ಪಿಎಫ್ ಮತ್ತು ಸಿಐಎಸ್‌ಎಫ್’ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಪೊಲೀಸ್ ಕರ್ತವ್ಯಗಳಿಗೆ ಭಾರತೀಯ ನಾಯಿ ತಳಿಗಳನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳಲಿವೆ.

ಶೀಘ್ರವೇ ಇಂತಹ ಕರ್ತವ್ಯ ನಿರ್ವಹಿಸಲು ಭಾರತೀಯ ನಾಯಿ ತಳಿಗಳನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಪ್ರಸ್ತುತ ಕೆಲವೇ ಭಾರತೀಯ ತಳಿಯ ನಾಯಿಗಳು ಭಾರತೀಯ ಸೇನೆಯಲ್ಲಿ ಮತ್ತು ಕೆಲವು ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಇವುಗಳನ್ನು ಬಳಸುತ್ತಿವೆ.

ಭಾರತೀಯ ನಾಯಿ ತಳಿಯ ಮುಧೋಳ ನಾಯಿಯ ಪ್ರಯೋಗವನ್ನು ಈಗಾಗಲೇ ಎಸ್‌ಎಸ್ಬಿ ಮತ್ತು ಐಟಿಬಿಪಿ ಮುಕ್ತಾಯಗೊಳಿಸಿವೆ. ರಾಂಪುರ ಹೌಂಡ್ನಂತಹ ಇತರ ಕೆಲವು ಭಾರತೀಯ ನಾಯಿ ತಳಿಗಳ ಪ್ರಯೋಗಗಳು ಸಿಆರ್ಪಿಎಫ್ ಮತ್ತು ಬಿಎಸ್‌ಎಫ್ನ ಶ್ವಾನ ತರಬೇತಿ ಕೇಂದ್ರಗಳಲ್ಲಿ ನಡೆಯುತ್ತಿವೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮಾಲಯ ಪರ್ವತ ನಾಯಿಗಳಾದ ಹಿಮಾಚಲಿ ಶೆಫರ್ಡ್, ಗಡ್ಡಿ, ಬಖರ್ವಾಲ್ ಮತ್ತು ಟಿಬೆಟಿಯನ್ ಮಾಸ್ಟಿಫ್ ಅನ್ನು ಬಿಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್ಬಿ ಪ್ರಯೋಗಗಳಿಗೆ ಒಳಪಡಿಸಲು ಸಚಿವಾಲಯ ಆದೇಶಿಸಿದೆ. ಅವುಗಳ ಪ್ರಯೋಗಗಳು ಈಗ ನಡೆಯುತ್ತಿವೆ.



Join Whatsapp