ಪಿಎಫ್‌ಐ ನಾಯಕನ ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡ ಮಹಿಳಾ ಪೊಲೀಸ್ ವಿರುದ್ಧ ಕ್ರಮಕ್ಕೆ ಶಿಫಾರಸು

Prasthutha|

ಕೋಟಯಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳ ರಾಜ್ಯ ಕಾರ್ಯದರ್ಶಿ ಸಿ.ಎ ರವೂಫ್ ತಮ್ಮ ಫೇಸ್‌ಬುಕ್‌‌ನಲ್ಲಿ ಮಾಡಿದ್ದ ಪೋಸ್ಟ್ ಒಂದನ್ನು ಹಂಚಿಕೊಂಡ ಮಹಿಳಾ ಎಎಸ್ಐ ವಿರುದ್ಧ ಕ್ರಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಶಿಫಾರಸು ಮಾಡಲಾದ ಘಟನೆ ನಡೆದಿದೆ.

- Advertisement -

ಕೋಟಯಂ ಜಿಲ್ಲೆಯ ಕಾಞಿರಪ್ಪಳ್ಳಿ ಪೊಲೀಸ್ ಠಾಣೆಯ ಎಎಸ್ಐ ರಮ್ಲಾ ಇಸ್ಮಾಯಿಲ್ ಪಿಎಫ್ಐ ನಾಯಕರ ಫೇಸ್‌ಬುಕ್‌ ಪೋಸ್ಟ‌ನ್ನು ಹಂಚಿಕೊಂಡಿದ್ದು, ಈ ಕುರಿತಂತೆ ಇಲಾಖೆಯ ಆಂತರಿಕ ವಿಚಾರಣೆ ನಡೆದಿತ್ತು. ಆ ಬಳಿಕ ಕೋಟಯಂ ಪೊಲೀಸ್ ವರಿಷ್ಠಾಧಿಕಾರಿ ಕೆ ಕಾರ್ತಿಕ್ ರಮ್ಲಾ ವಿರುದ್ಧ ಕ್ರಮಕ್ಕೆ ಮಧ್ಯ ವಲಯ ಡಿಐಜಿ ನೀರಜ್ ಕುಮಾರ್ ಗುಪ್ತಾಗೆ ಶಿಫಾರಸು ಮಾಡಿದ್ದಾರೆ.

ರಮ್ಲಾ ಪೊಲೀಸ್ ಶಿಸ್ತನ್ನು ಪಾಲಿಸಿಲ್ಲ ಎಂದೂ ಡಿಐಜಿಗೆ ಸಲ್ಲಿಸಲಾಗಿದ್ದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

- Advertisement -

ಇತ್ತೀಚೆಗೆ ಆಲಪ್ಪುಝದಲ್ಲಿ ನಡೆದ ಪಿಎಫ್‌ಐ ರ್ಯಾಲಿಯಲ್ಲಿ ಪುಟ್ಟ ಬಾಲಕನೋರ್ವ ಕೂಗಿದ ಘೋಷಣೆ ಹಿನ್ನೆಲೆಯಲ್ಲಿ 31 ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ಜಾಮೀನು ದೊರೆತ ವೇಳೆ ಜುಲೈ 5ರಂದು ಸರ್ವಶಕ್ತನಿಗೆ ಧನ್ಯವಾದ ಅರ್ಪಿಸಿ ಸಿ.ಎ ರವೂಫ್ ಪೋಸ್ಟ್ ಹಾಕಿದ್ದರು. ಇದನ್ನು ಎಎಸ್ಐ ರಮ್ಲಾ ಹಂಚಿಕೊಂಡಿದ್ದರು



Join Whatsapp