ಅಸಲಿ ತಾಲಿಬಾನ್ ನಾಗ್ಪುರದಲ್ಲಿದೆ: ಬ್ರಿಜೇಶ್ ಕಾಳಪ್ಪ

Prasthutha|

ಬೆಂಗಳೂರು: ಅಸಲಿ ತಾಲಿಬಾನ್ ನಿಮ್ಮ‌ ನಾಗ್ಪುರದಲ್ಲಿದೆ. ಅಸಲಿ ತಾಲಿಬಾನ್ ಯಾರು ಎಂದು ಯತ್ನಾಳ್ ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಯತ್ನಾಳ್ ಮುಖ್ಯಮಂತ್ರಿಗಾಗಿ ಹುಚ್ಚು ಹುಚ್ಚು ಮಾತನಾಡುವುದನ್ನು ನಿಲ್ಲಿಸಲಿ. ಆರೆಸ್ಸೆಸ್ ಮತ್ತು ತಾಲಿಬಾನ್ ಒಂದೇ ರೀತಿಯಲ್ಲಿ ಕಾಣುತ್ತಿದೆ. ಹಲವು ವಿಚಾರದಲ್ಲಿ ಅವರ ಸಿದ್ಧಾಂತಗಳು ತಾಳೆಯಾಗುತ್ತಿದೆ ಎಂದು ಹೇಳಿದರು.

- Advertisement -

ಯಾರು ನಿಜವಾದ ತಾಲಿಬಾನ್ ಎಂಬುದನ್ನು ಯತ್ನಾಳ್ ಯೋಚನೆ ಮಾಡಲಿ. ನಿಮಗೆ ಗೊತ್ತಾಗುತ್ತೆ ಅಸಲಿ ತಾಲಿಬಾನ್ ನಿಮ್ಮ ನಾಗ್ಪುರದಲ್ಲಿದೆ. ಆ ಕಾರಣದಿಂದ ಹಗುರವಾಗಿ ಮಾತನಾಡಬೇಡಿ. ದೇಶ ಕಟ್ಟುವ ಕೆಲಸದಲ್ಲಿ ನಾವು ಕೂಡ ನಿಮ್ಮ ಜೊತೆಗೆ ನಿಲ್ಲುತ್ತೇವೆ. ಇಂತಹ ಚಿಲ್ಲರೆ ರಾಜಕಾರಣ, ಹತಾಶೆಯಿಂದ, ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಿದರೆ ಅದಕ್ಕೆ ಲಗಾಮು ಹಾಕಲು ನಾವು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಾಗಿದ್ದರೆ ಆರೆಸ್ಸೆಸ್ ನ್ನು ತಾಲಿಬಾನ್ ಎನ್ನುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬ್ರಿಜೇಶ್ ಕಾಳಪ್ಪ, ಒಂದೊಂದು ಸಲ ತಾಲಿಬಾನಿಗರಂತೆಯೇ ನಡೆದುಕೊಂಡಿರುವುದು ಸತ್ಯ. ಅವರ ರೀತಿಯಲ್ಲೇ ವರ್ತಿಸಿರುವುದು ಕಾಣ ಸಿಗುತ್ತದೆ. ಯಾಕೆಂದರೆ ಬಿಜೆಪಿಗರು ಹೆಣ್ಣುಮಕ್ಕಳು ಮಹಿಳೆಯರ ವಿರುದ್ಧವಿರುತ್ತಾರೆ. ಮೋಹನ್ ಭಾಗವತ್ ಹೇಳಿರುವಂತೆ ಮಹಿಳೆಯರು ಇಂತಹ ಕಡೆ ಬರುವಂತಿಲ್ಲ ಎಂದು ಹೇಳಿರುವುದು ಸತ್ಯ ತಾನೇ ಎಂದು ಪ್ರಶ್ನಿಸಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ತಾಲಿಬಾನಿಗರಿಗೂ ಇದೇ ರೀತಿಯ ಮನಸ್ಥಿತಿಯಿದೆ. ಹಾಗಾಗಿ ಆರೆಸ್ಸೆಸ್ ಮತ್ತು ತಾಲಿಬಾನಿಗೂ ಮ್ಯಾಚ್ ಆಗುತ್ತೆ ಎಂದು ಹೇಳಿದರು.

- Advertisement -

2001ರಲ್ಲಿ ಬಾಮಿಯಾಸ್ ಬುದ್ಧಲಿಯನ್ನು ತಾಲಿಬಾನಿಗರು ಹೊಡೆದು ಧ್ವಂಸ ಮಾಡುತ್ತಾರೆ. ಈ ಸಂದರ್ಭ ತಾಲಿಬಾನಿ ವಕ್ತಾರರೊಂದಿಗೆ ಪತ್ರಕರ್ತರ ಯಾಕೆ ಇದನ್ನು ಧ್ವಂಸ ಮಾಡಿದ್ರೀ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಇದು ಕಲ್ಚರಲ್ ಇಂಟಿಗ್ರೇಶನ್ ಮಾಡುತ್ತಿದ್ದೇವೆ. ಅದನ್ನು ಮಾಡುವ ಸಂದರ್ಭದಲ್ಲಿ ಭಾರತದಲ್ಲೂ ನಡೆದಿದೆಯಲ್ವಾ ಮತ್ತು 1992ರಲ್ಲಿ ಬಾಬ್ರಿ ಮಸ್ಜಿದ್ ನನ್ನು ಧ್ವಂಸ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಹಾಗಾಗಿ ಇದರ ಅರ್ಥವೇನು ಎಂದು ಪ್ರಶ್ನಿಸಿದ ಬ್ರಿಜೇಶ್ ಕಾಳಪ್ಪ, ಯಾರು ಯಾರಿಂದ ಪಾಠ ಕಲಿಯುತ್ತಿದ್ದಾರೆ? ಎಂದು ಹೇಳಿದ್ದಾರೆ.

Join Whatsapp