ಕೀವ್: ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರು ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಒತ್ತಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ರಷ್ಯಾ ಪರ ಒಡೆದಿರುವ ಪ್ರದೇಶಗಳಾದ ದೊನೆಸ್ತ್ಕ್ ಮತ್ತು ಲುಹಾನ್ಸ್ಕ್ ವಿಷಯದಲ್ಲಿ ರಾಜಿಗೆ ಸಿದ್ಧ ಎಂದು ಪ್ರಕಟಿಸಿದ್ದಾರೆ.
ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರವಾಗಿ ನ್ಯಾಟೋ ಸೇನೆಗೆ ನೆಲೆ ನೀಡುತ್ತದೆ ಎಂಬ ಕಾರಣಕ್ಕಾಗಿ ಅದರ ಮೇಲೆ ದಾಳಿ ಮಾಡಲು ಕಾರಣ ಎಂದು ರಷ್ಯಾ ಹೇಳಿದೆ. ಬಗಲಲ್ಲಿ ಪಾಶ್ಚಾತ್ಯ ಮಿತ್ರ ಇರಲು ಬಿಡಲಾಗದು ಎನ್ನುವುದು ರಷ್ಯಾ ನಿಲುವು.
ಫೆಬ್ರವರಿ 24ರಂದು ದಾಳಿಗೆ ಮೊದಲು ರಷ್ಯಾವು ದೊನೆಸ್ತ್ಕ್ ಮತ್ತು ಲುಹಾನ್ಸ್ಕ್ ಸ್ವತಂತ್ರ ಪ್ರದೇಶಗಳು ಎಂಬ ಹೇಳಿಕೆಯನ್ನು ವ್ಲಾದಿಮಿರ್ ಪುತಿನ್ ನೀಡಿದ್ದರು.
“ನ್ಯಾಟೋ ಉಕ್ರೇನನ್ನು ಒಪ್ಪಿ ಅಪ್ಪಿಕೊಳ್ಳದು ಎಂದು ನಾನು ಮೊದಲೇ ತಿಳಿದುಕೊಂಡೆ ಮತ್ತು ಮಾನಸಿಕವಾಗಿ ಅದಕ್ಕೆ ತಯಾರಾಗಿದ್ದೇನೆ ಎಂದು ಝೆಲೆನ್ಸ್ಕಿ ಎಬಿಸಿ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಒಕ್ಕೂಟವು ವಿವಾದಿತ ವಿಷಯದಲ್ಲಿ ತಲೆ ಹಾಕಲು ಹೆದರಿದೆ ಮತ್ತು ರಷ್ಯಾವನ್ನು ಎದುರು ಹಾಕಿಕೊಳ್ಳಲು ಬಯಸಿಲ್ಲ” ಎಂದೂ ಅವರು ಹೇಳಿದರು.
ಯಾವುದೇ ಬೇಡುವ ಸ್ಥಿತಿಯ ದೇಶವನ್ನು ನ್ಯಾಟೋ ಕೂಟ ಅಪ್ಪಿಕೊಳ್ಳದು ಎನ್ನುವುದು ನನಗೆ ಮನವರಿಕೆಯಾಗಿದೆ ಎಂದೂ ಅಧ್ಯಕ್ಷರು ಹೇಳಿದರು.
ನೆರೆಹೊರೆಯಲ್ಲಿ ಅಟ್ಲಾಂಟಿಕ್ ನ್ಯಾಟೋ ಒಕ್ಕೂಟ ಇರಕೂಡದು. ಅದು ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ನಡುವೆ ಒಂದು ಶೀತಲ ಸಮರಕ್ಕೆ ದಾರಿಯಾಗಲಿದೆ ಎಂದು ಅವರು ತಿಳಿಸಿದರು.
ನ್ಯಾಟೋ ಕೂಟವು ಇತ್ತೀಚೆಗೆ ಹೆಚ್ಚು ಹೆಚ್ಚು ಪೂರ್ವ ಭೂಖಂಡದತ್ತ ವಿಸ್ತರಿಸಿದ್ದು, ಹಿಂದಿನ ಸೋವಿಯತ್ ಒಕ್ಕೂಟದ ನೆಲೆಗಳಲ್ಲಿ ನೆಲೆಯೂರುವುದು ಕ್ರೆಮ್ಲಿನ್ ಗೆ ಕೋಪ ಬರಿಸಿದೆ.
ನ್ಯಾಟೋ ವಿಸ್ತರಣೆಯು ಒಂದು ಅಪಾಯ ಎಂದು ರಷ್ಯಾ ಭಾವಿಸಿದೆ. ಈ ಪಾಶ್ಚಾತ್ಯ ನೆಲೆಗಳು ಅವರ ಹಿತಾಸಕ್ತಿಯ ಶಕ್ತಿ ಆಟಕ್ಕೆ ಬಳಕೆಯಾಗುವುದನ್ನು ರಷ್ಯಾ ಬಯಸಿಲ್ಲ.
ಪೂರ್ವ ಉಕ್ರೇನಿನ ದೊನೆಸ್ತ್ಕ್ ಮತ್ತು ಲುಹಾನ್ಸ್ಕ್ ಗಳು 2014ರಿಂದಲೂ ಪ್ರತ್ಯೇಕತೆ ಸಾರಿ ಕೀವ್ ಜೊತೆಗೆ ಹೋರಾಡುತ್ತಲಿವೆ. ಈ ರಷ್ಯಾ ಪರ ರಿಪಬ್ಲಿಕ್ ಗಳು ಸಹ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಒಂದು ಕಾರಣವಾಗಿದೆ.
ಉಕ್ರೇನ್ ಕೂಡ ಆ ಎರಡು ಪ್ರಾಂತ್ಯಗಳನ್ನು ಸ್ವತಂತ್ರವೆಂದು ಮನ್ನಿಸಬೇಕು ಎಂದು ಪುತಿನ್ ಬಯಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಝೆಲೆನ್ಸ್ಕಿಯವರು ನಾನು ಮಾತುಕತೆಗೆ ಸಿದ್ಧನಿದ್ದೇನೆ ಎಂದರು.
“ನನಗೀಗ ಭದ್ರತಾ ಖಾತರಿ ಬೇಕಾಗಿದೆ” ಎಂದು ಉಕ್ರೇನ್ ಅಧ್ಯಕ್ಷರು ತಿಳಿಸಿದರು.
“ಈ ಎರಡು ಪ್ರಾಂತ್ಯಗಳಿಗೆ ರಷ್ಯಾದ ಹೊರತಾಗಿ ಬೇರೆ ಯಾವ ದೇಶಗಳೂ ಮಾನ್ಯತೆ ನೀಡಿಲ್ಲ. ನಾವು ಮುಂದೆ ಈ ಪ್ರಾಂತ್ಯಗಳು ಹೇಗೆ ಇರಬೇಕು ಎಂಬ ಬಗ್ಗೆ ಮಾತುಕತೆಯ ಮೂಲಕ ತೀರ್ಮಾನಕ್ಕೆ ಬರಲು ಬಯಸಿದ್ದೇವೆ” ಎಂದು ಅವರು ಹೇಳಿದರು.
“ಅಲ್ಲಿನ ಜನರು ಉಕ್ರೇನಿನ ಭಾಗವಾಗಿ ಬಾಳಬೇಕು ಎನ್ನುವುದು ಈಗಿನ ಮುಖ್ಯ ವಿಷಯವಾಗಿದೆ. ಅವರನ್ನು ಉಕ್ರೇನಿಗರು ಬಿಡಲಾರರು, ಅವರೂ ಉಕ್ರೇನನ್ನು ಬಿಡಬಾರದು” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
“ಇದು ಮತ್ತೊಂದು ಕೊನೆಯ ನಿರ್ಧಾರವಾಗಿದೆ. ನಾವು ಯಾವುದೇ ಕೊನೆಯ ನಿರ್ಧಾರಕ್ಕೆ ಸಿದ್ಧರಾಗಿಲ್ಲ. ಪುತಿನ್ ರಿಗೂ ಒಳ್ಳೆಯದು ಏನೆಂದರೆ ಈಗ ಮಾತುಕತೆಯನ್ನು ಆರಂಭಿಸುವುದು. ಆಮ್ಲಜನಕ ಇಲ್ಲದೆ ಬರೇ ನೀರ್ಗುಳ್ಳೆಯ ಸುದ್ದಿಯಲ್ಲಿ ಬದುಕಲಾಗದು” ಎಂದು ಉಕ್ರೇನ್ ಅಧ್ಯಕ್ಷರು ತಿಳಿಸಿದರು.