ಟೋಕಿಯೋ ಒಲಿಂಪಿಕ್ಸ್ | ಕುಸ್ತಿ : ಫಿನಾಲೆಯಲ್ಲಿ ಶರಣಾದ ರವಿಕುಮಾರ್

Prasthutha|

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್‌ ಕುಸ್ತಿ ವಿಭಾಗದಲ್ಲಿ ಫೈನಲ್‌ನಲ್ಲಿ ಸೋಲು ಅನುಭವಿಸಿರುವ ಭಾರತದ ರವಿಕುಮಾರ್ ದಹಿಯಾ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಗುರುವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ರವಿಕುಮಾರ್,4-7 ಅಂತರದಲ್ಲಿ ವಿಶ್ವ ಚಾಂಪಿಯನ್‌, ರಷ್ಯಾದ ಜವೂರ್ ಉಗುವೆ ಎದುರು ಸೋಲು ಅನುಭವಿಸಿದರು.

- Advertisement -

ಈ ಮೂಲಕ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಭಾರತ ಎರಡನೇ ಬೆಳ್ಳಿ ಪದಕ ಹಾಗೂ ಒಟ್ಟಾರೆಯಾಗಿ 4ನೇ ಪದಕ ಗೆದ್ದಂತಾಗಿದೆ. ಇದಕ್ಕೂ ಮೊದಲು ವೈಟ್ ಲಿಫ್ಟಿಂಗ್ ನಲ್ಲಿ ಮೀರಾಭಾಯ್ ಚಾನು ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ದೊರೆಯುತ್ತಿರುವ ಎರಡನೇ ಬೆಳ್ಳಿ ಪದಕ ಇದಾಗಿದೆ.

23 ವರ್ಷದ ರವಿಕುಮಾರ್ ದಹಿಯಾ ತನ್ನ ಚೊಚ್ಚಲ ಒಲಿಂಪಿಕ್ಸ್ ಪ್ರವೇಶದಲ್ಲೇ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ

- Advertisement -

Join Whatsapp