ಔರಂಗಜೇಬ್ ಸಮಾಧಿಗೆ ಅಕ್ಬರುದ್ದೀನ್ ಉವೈಸಿ ಭೇಟಿ: ಅಂಕಣಕಾರನ ಟೀಕೆಗೆ ನಟಿ ರವೀನಾ ಟಂಡನ್ ಪ್ರತ್ಯುತ್ತರ

Prasthutha|

ಬೆಂಗಳೂರು: ಮೊಘಲ್ ದೊರೆ ಔರಂಗಜೇಬ್ ನ ಸಮಾಧಿ ಸ್ಥಳಕ್ಕೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಉವೈಸಿ ಭೇಟಿ ನೀಡಿದ್ದಕ್ಕೆ ಕೇಳಿಬಂದ ಟೀಕೆಗೆ ಬಾಲಿವುಡ್ ನಟಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ರವೀನಾ ಟಂಡನ್, ನಾವು ಸಹಿಷ್ಣುಗಳು, ಸಹಿಷ್ಣುಗಳಾಗಿಯೇ ಉಳಿಯುತ್ತೇವೆ. ಇದು ಮುಕ್ತ ರಾಷ್ಟ್ರ. ಯಾರನ್ನೂ ಬೇಕಿದ್ದರು ಆರಾಧಿಸಬಹುದು. ಎಲ್ಲರಿಗೂ ಸಮಾನ ಹಕ್ಕು ಇದೆ ಎಂದು ತಿಳಿಸಿದ್ದಾರೆ.

ಗುರು ತೇಜ್ ಬಹದೂರ್ ಅವರನ್ನು ಶಿರಚ್ಛೇದ ನಡೆಸಿದ, ಸಂಭಾಜಿ ಮಹಾರಾಜನ ಕಡಿದ, ಕಾಶಿಯನ್ನು ನಾಶಗೈದ ಮತ್ತು 49 ಲಕ್ಷ ಹಿಂದೂ ಕೊಲೆ ನಡೆಸಿದ ಔರಂಗಜೇಬ್ ನ ಸಮಾಧಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದು ಹುಚ್ಚುತನದ ಕೃತ್ಯ ಎಂದು ಅಂಕಣಕಾರ ಆನಂದ್ ರಂಗನಾಥಮ್ ಎಂಬವರು ವಿಮರ್ಶಿಸಿದ್ದರು.

- Advertisement -

ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಅವರು ತಿಗುಗೇಟು ನೀಡಿದ್ದಾರೆ.



Join Whatsapp