ಪುದು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ರಶೀದಾ ಬಾನು ಆಯ್ಕೆ

Prasthutha|

ಫರಂಗಿಪೇಟೆ: ಬಂಟ್ವಾಳ ತಾಲೂಕಿನ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಪುದು ಗ್ರಾಮ ಪಂಚಾಯತ್’ನ ನೂತನ ಅಧ್ಯಕ್ಷರಾಗಿ ರಶೀದಾ ಬಾನು ಹಾಗೂ ಉಪಾಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಸುಜೀರ್ ಆಯ್ಕೆಯಾಗಿದ್ದಾರೆ.

- Advertisement -


ಮಂಗಳವಾರ ಪುದು ಪಂಚಾಯತ್ ಕಚೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ  ಸ್ಥಾನಕ್ಕೆ ರಶೀದಾ ಬಾನು, ಉಪಾಧ್ಯಕ್ಷ ಸ್ಥಾನಕ್ಕೆ ಮುಹಮ್ಮದ್ ಇಕ್ಬಾಲ್ ಸುಜೀರ್, ಎಸ್.ಡಿಪಿಐ ಯಿಂದ ಅಧ್ಯಕ್ಷ ಸ್ಥಾನಕ್ಕೆ ರುಕ್ಸಾನ ಸಲಾಂ, ಉಪಾಧ್ಯಕ್ಷ ಸ್ಥಾನಕ್ಕೆ ನಝೀರ್ ಕುಂಜತ್ಕಳ, ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಪದ್ಮನಾಭ ಶೆಟ್ಟಿ ನೆತ್ರೆಕೆರೆ ನಾಮಪತ್ರ ಸಲ್ಲಿಸಿದ್ದರು.

- Advertisement -

ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು 34 ಸದಸ್ಯ ಸ್ಥಾನದಲ್ಲಿ 33 ಸದಸ್ಯರು ಮತ ಚಲಾವಣೆ ಮಾಡಿದ್ದು ಪಕ್ಷೇತರ ಅಭ್ಯರ್ಥಿ ಆತಿಕ ಗೈರು ಹಾಜರಾಗಿದ್ದಾರೆ.

ಒಟ್ಟು ಚಲಾವಣೆಯಾದ ಮತದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ರಶೀದಾ ಬಾನು ರವರಿಗೆ 20,  ಉಪಾಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ಇಕ್ಬಾಲ್ ಸುಜೀರ್ ರವರಿಗೆ 20,  ಎಸ್.ಡಿಪಿಐ ಬೆಂಬಲಿತರಾದ ರುಕ್ಸಾನ ಸಲಾಮ್ ರವರಿಗೆ  7, ನಝೀರ್ ಕುಂಜತ್ಕಳ ರವರಿಗೆ 7 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಪದ್ಮನಾಭ ಶೆಟ್ಟಿ ನೆತ್ರೆಕೆರೆ ಯವರಿಗೆ 6 ಮತಗಳು ದೊರೆತಿವೆ.

ಫೆಬ್ರವರಿ 25 ರಂದು ಚುನಾವಣೆ ನಡೆದಿದ್ದು ಒಟ್ಟು 34 ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ,  ಕಾಂಗ್ರೆಸ್  ಬೆಂಬಲಿತರು 19, ಎಸ್. ಡಿಪಿಐ ಬೆಂಬಲಿತರು 7, ಬಿಜೆಪಿ ಬೆಂಬಲಿತರು 6 ಹಾಗೂ ಪಕ್ಷೇತರರು 2 ಸ್ಥಾನ ಪಡೆದಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿ ನಿಗಧಿಪಡಿಸಲಾಗಿತ್ತು.



Join Whatsapp