ಖ್ಯಾತ ಚಿತ್ರ ವಿಮರ್ಶಕ ರಶೀದ್ ನಿಧನ

Prasthutha|

ಮುಂಬೈ, ಆ.3: ಸಿನಿಮಾ ವಿಮರ್ಶಕ ರಶೀದ್ ಇರಾನಿ ತಮ್ಮ ದಕ್ಷಿಣ ಮುಂಬಯಿಯ ದೋಬಿ ತಲಾವ್ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ಪ್ರಾಯವಾಗಿತ್ತು.

- Advertisement -


ಅವಿವಾಹಿತರಾದ ಅವರು ಒಂಟಿಯಾಗಿ ಬದುಕುತ್ತಿದ್ದರು. ವೃದ್ಧಾಪ್ಯ ಸಂಬಂಧಿ ಸೇರಿದಂತೆ ಹಲವು ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಅವರು ಜುಲೈ 30ರಂದು ನಿಧನರಾಗಿರಬಹುದು, ಆದರೆ ಆಗಸ್ಟ್ 2ರಂದಷ್ಟೆ ಅದು ಬೆಳಕಿಗೆ ಬಂದಿದೆ.
ಕರಣ್ ಜೋಹರ್ ರಿಂದ ಹಿಡಿದು ಹಲವು ಚಿತ್ರರಂಗದ ಪ್ರಮುಖರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಕರಣ್ ಜೋಹರ್ ಅವರು ಆತ್ಮಕ್ಕೆ ಶಾಂತಿ ದೊರೆಯಲಿ, ನೆನಪು, ನಿಮ್ಮ ಸಿನಿಮಾ ಬಗೆಗಿನ ಒಳನೋಟ ದೊಡ್ಡ ಖಜಾನೆ ಎಂದು ಟ್ವೀಟ್ ಮಾಡಿದ್ದಾರೆ.

Join Whatsapp