ಭಾರತದಲ್ಲಿ ಅತ್ಯಾಚಾರ, ಹಿಂಸೆ ಹೆಚ್ಚಾಗಿದೆ, ಅಲ್ಲಿಗೆ ಪ್ರಯಾಣಿಸುವವರು ಎಚ್ಚರಿಕೆ ವಹಿಸಿ: ಅಮೆರಿಕ ಸೂಚನೆ

Prasthutha|

ವಾಷಿಂಗ್ಟನ್: ಭಾರತದಲ್ಲಿ ಹಿಂಸೆ, ಉಗ್ರವಾದ ಮತ್ತು ಪ್ರವಾಸಿ ತಾಣಗಳಲ್ಲಿ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿಗೆ ಪ್ರಯಾಣಿಸುವವರು ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಬಿಡುಗಡೆಗೊಳಿಸಿರುವ ಪ್ರವಾಸಿ ಸಲಹಾವಳಿಯಲ್ಲಿ ತಿಳಿಸಿದೆ.

- Advertisement -

ಅಪರಾಧ ಮತ್ತು ಭಯೋತ್ಪಾದನೆಯಿಂದಾಗಿ ಭಾರತಕ್ಕೆ ಪ್ರಯಾಣಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ಅಮೆರಿಕ ಶುಕ್ರವಾರ ತನ್ನ ನಾಗರಿಕರಿಗೆ ಸೂಚಿಸಿದೆ. ಅದರಲ್ಲೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ಸಲಹೆ ನೀಡಿದೆ.

ಶುಕ್ರವಾರ ಬಿಡುಗಡೆ ಮಾಡಲಾಗಿರುವ ‘ಇಂಡಿಯಾ ಟ್ರಾವೆಲ್ ಅಡ್ವೈಸರಿ ಲೆವೆಲ್ 2’ಯಲ್ಲಿ ಈ ಕುರಿತಂತೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಯಾಣ ಮಾರ್ಗಸೂಚಿಯು ಲೆವೆಲ್ 1, ಲೆವೆಲ್ 2, ಲೆವೆಲ್ 3 ಹಾಗೂ ಲೆವೆಲ್ 4 ಎಂಬ ನಾಲ್ಕು ಹಂತಗಳಿರುತ್ತವೆ. ಇವುಗಳಲ್ಲಿ ಲೆವೆಲ್ 4 ಎಂಬುದು ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯನ್ನು ನೀಡಲಾಗಿದ್ದು ಆ ದೇಶಗಳಿಗೆ ಹೋಗಬಯಸುವವರಿಗೆ ಅತಿ ಗರಿಷ್ಠ ಮಟ್ಟದ ಎಚ್ಚರಿಕೆಗಳನ್ನು ನೀಡಲಾಗಿರುತ್ತದೆ. ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಭಾರತ ಪ್ರಯಾಣ ಸಲಹಾ ಮಟ್ಟವನ್ನು ಒಂದರಿಂದ 4 ರ ಪ್ರಮಾಣದಲ್ಲಿ 2 ಕ್ಕೆ ಇಳಿಸಿದೆ.

- Advertisement -

ಭಾರತದ ಕೇಂದ್ರಾಡಳಿ ಪ್ರದೇಶಗಳಲ್ಲೊಂದಾದ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಬಾರದು. ಆದರೆ, ಲಡಾಖ್ ಪ್ರಾಂತ್ಯಕ್ಕೆ ಹಾಗೂ ಅದರ ರಾಜಧಾನಿ ಲೇಹ್ ಗೆ ಭೇಟಿ ನೀಡಬಹುದು. ಭಾರತ- ಪಾಕಿಸ್ತಾನದ ಗಡಿಯಿಂದ ಭಾರತದೊಳಕ್ಕೆ ಸುಮಾರು 10 ಕಿ.ಮೀ.ವರೆಗೆ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳಿದೆ.

ಒಂದು ದಿನದ ಹಿಂದೆ ವಿದೇಶಾಂಗ ಇಲಾಖೆ ಪ್ರತ್ಯೇಕ ಸಲಹೆಯಲ್ಲಿ ಪಾಕಿಸ್ತಾನವನ್ನು 3 ನೇ ಹಂತಕ್ಕೆ ಸೇರಿಸಿತ್ತು ಮತ್ತು ಭಯೋತ್ಪಾದನೆ ಮತ್ತು ಪಂಥೀಯ ಹಿಂಸಾಚಾರದಿಂದಾಗಿ ವಿಶೇಷವಾಗಿ ಪ್ರಕ್ಷುಬ್ಧ ಪ್ರಾಂತ್ಯಗಳ ಪ್ರಯಾಣವನ್ನು ಮರುಪರಿಶೀಲಿಸುವಂತೆ ತನ್ನ ನಾಗರಿಕರಿಗೆ ಸೂಚಿಸಿತ್ತು.

Join Whatsapp