February 27, 2021
ಅತ್ಯಾಚಾರಗೈದು ಯುವತಿಗೆ ಬೆಂಕಿ ಹಚ್ಚಿದ ತಂದೆ ಮಗ

ಸೀತಾಪುರ : ಉತ್ತರಪ್ರದೇಶದಲ್ಲಿ ತಂದೆ ಮಗ ಸೇರಿ ಯುವತಿಯನ್ನು ಅತ್ಯಾಚಾರಗೈದು ಆಕೆಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗಂಭೀರ ಸುಟ್ಟ ಗಾಯಗಳಾದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ತಂದೆ ಮಗನನ್ನು ಬಂಧಿಸಲಾಗಿದೆ.
ಸೀತಾಪುರ ತೆರಳುವ ದಾರಿ ಮಧ್ಯೆ ಯುವತಿಗೆ ಆ ದಾರಿಯಲ್ಲಿ ರಿಕ್ಷಾ ಚಲಾಯಿಸುತ್ತಾ ಬಂದ ಆರೋಪಿಗಳು ಯುವತಿಗೆ ಲಿಫ್ಟ್ ಕೊಡುವುದಾಗಿ ಹತ್ತಿಸಿ ಅತ್ಯಾಚಾರ ಮಾಡಿ ಯುವತಿಗೆ ಬೆಂಕಿ ಹಚ್ಚಿದ್ದಾರೆ.
ಮಿಶ್ರಿಕ್ ನ ಯುವತಿಯನ್ನು ಇಬ್ಬರು ಸೇರಿ ಅತ್ಯಾಚಾರ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಹೆಲ್ಪ್ ಲೈನ್ ನಂಬರಿಗೆ ಸಾರ್ವಜನಿಕರು ಕರೆ ಮಾಡಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸೀತಾಪುರ ಜಿಲ್ಲಾಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದು. ಘಟನೆಗೆ ಸಂಬಂಧಿಸಿ ವಿವರವಾದ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.