ಅತ್ಯಾಚಾರ ಬೆದರಿಕೆ ಹಾಕಿದ ಭಜರಂಗ್ ದಾಸ್ ನನ್ನು ಬಂಧಿಸಿ: ರಾಷ್ಟ್ರೀಯ ಮಹಿಳಾ ಆಯೋಗ

Prasthutha|


ನವದೆಹಲಿ: ಮುಸ್ಲಿಮ್‌ ಸಮುದಾಯದ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿರುವ ಉತ್ತರ ಪ್ರದೇಶದ ಸ್ವಾಮಿ ಭಜರಂಗ್ ದಾಸ್ ಮುನಿಯನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಶುಕ್ರವಾರ ಪೊಲೀಸರಿಗೆ ಸೂಚಿಸಿದೆ.

- Advertisement -

ಅಲ್ಲದೆ ಮೂಕ ಪ್ರೇಕ್ಷಕರಾಗದೇ ಇಂತಹ ಘಟನೆಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಛೀಮಾರಿ ಹಾಕಿದೆ.

ಕೇಸರಿ ವಸ್ತ್ರಧಾರಿ ಸ್ವಾಮಿ ಭಜರಂಗ್ ದಾಸ್ ಮುನಿ ಅವರು ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಮತ್ತು “ಅತ್ಯಾಚಾರ ಬೆದರಿಕೆ” ಹಾಕುತ್ತಿರುವ ವೀಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Join Whatsapp